ಆ.13: ಪುತ್ತೂರು ತಾ.ಬಂಟರ ಸಂಘದಿಂದ ಆಟಿಡೊಂಜಿ ದಿನ – ಸಾಧಕರಿಗೆ ಚಿನ್ನದ ಪದಕ ಪ್ರಧಾನ – ಶಶಿಕುಮಾರ್ ರೈ ಬಾಲ್ಯೊಟ್ಟು

0

ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಆ.13ರಂದು ಪುತ್ತೂರು ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಆಟಿಡೊಂಜಿ ದಿನ ಮತ್ತು ಸಾಧಕರಿಗೆ ಚಿನ್ನದ ಪದಕ ಪ್ರಧಾನ ಕಾರ‍್ಯಕ್ರಮ ನಡೆಯಲಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪೂರ್ವಹ್ನ ಚಾವಡಿ ಕಾರ‍್ಯಕ್ರಮ:
ಬೆಳಿಗ್ಗೆ 10ರಿಂದ ನಡೆಯುವ ಬಂಟರ ಭವನದಲ್ಲಿ ಚಾವಡಿ ಕಾರ‍್ಯಕ್ರಮ ವಿಶಿಷ್ಟ ರೀತಿಯಲ್ಲಿ ನಡೆಯಲಿದ್ದು, ಬೆಳಿಗ್ಗೆ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ್ ಶೆಟ್ಟಿಯವರು ಧ್ವಜಾರೋಹಣವನ್ನು ನಡೆಸಿಕೊಡಲಿದ್ದಾರೆ. ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ್ ಕುಮಾರ್ ರೈ ದುಗ್ಗಳರವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ರೈ ಇಳಂತಾಜೆರವರು ಆಟಿದ ಕೂಟವನ್ನು ಉದ್ಘಾಟನೆ ಮಾಡಲಿದ್ದಾರೆ.

ಸಭಾ ಕಾರ‍್ಯಕ್ರಮ:
ಬೆಳಿಗ್ಗೆ 11ರಿಂದ ನಡೆಯುವ ಸಭಾ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರು ಉದ್ಘಾಟನೆಗೈಯಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹಾಗೂ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿರವರು ಸಾಧಕರನ್ನು ಸನ್ಮಾನಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ನಿರಂಜನ್ ರೈ ಮಠಂತಬೆಟ್ಟುರವರು ಆಶಯ ಮಾತುಗಳನ್ನು ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಹಿರಿಯ ಉದ್ಯಮಿ ಸವನೂರು ಎನ್.ಸುಂದರ ರೈರವರು ಭಾಗವಹಿಸಲಿದ್ದು, ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ನುಳಿಯಾಲು ಜಗನ್ನಾಥ ರೈ ಮಾದೋಡಿ, ಅರಿಯಡ್ಕ ಲಕ್ಷ್ಮಿನಾರಾಯಣ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು ಹಾಗೂ ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ಡರವರುಗಳ ಗೌರವ ಉಪಸ್ಥಿತಿ ಇರಲಿದ್ದಾರೆ ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ

11 ಮಂದಿ ಬಂಟ ಸಮಾಜದ ಸಾಧಕರಿಗೆ ಚಿನ್ನದ ಪದಕ ಪ್ರಧಾನ
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಂಟ ಸಮಾಜದ 11 ಮಂದಿಯನ್ನು ಚಿನ್ನದ ಪದಕ ನೀಡಿ, ಸನ್ಮಾನಿಸುವ ವಿಶಿಷ್ಟ ಕಾರ‍್ಯಕ್ರಮ ನಡೆಯಲಿದ್ದು, ಕಡಮಜಲು ಸುಭಾಷ್ ರೈ ಪ್ರಾಯೋಜಿತ ಸಿರಿ ಕಡಮಜಲು ಕೃಷಿ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ ಅರುಣ್ ಕುಮಾರ್ ರೈ ಆನಾಜೆರವರಿಗೆ, ಡಾ.ಬಿ.ಸಂಜೀವ ರೈ ಪ್ರಾಯೋಜಿತ ಬೂಡಿಯಾರ್ ವೈದ್ಯಕೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಮಕ್ಕಳ ತಜ್ಞ ಡಾ.ಮಂಜುನಾಥ ಶೆಟ್ಟಿರವರಿಗೆ, ಮಿತ್ರಂಪಾಡಿ ಚೆನ್ನಪ್ಪ ರೈ ಸ್ಮರಣಾರ್ಥ ಜಯರಾಮ್ ರೈ ಮಿತ್ರಂಪಾಡಿ ಉದ್ಯಮಿ ಅಬುದಾಬಿರವರ ಪ್ರಾಯೋಜಿತ ಸಮಾಜ ಸೇವಾ ಮಿತ್ರ ಪ್ರಶಸ್ತಿಯನ್ನು, ಸಮಾಜ ಸಮಾಜ ಸೇವಕ ಅರಿಯಡ್ಕ ಚಿಕ್ಕಪ್ಪ ನಾಕ್‌ರವರಿಗೆ, ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಪ್ರಾಯೋಜಿತ ಸಾಧಕ ಸಹಕಾರಿ ಪ್ರಶಸ್ತಿಯನ್ನು ಸಹಕಾರಿ ಸಾಧಕ ಎಸ್.ಬಿ.ಜಯರಾಮ ರೈ ಬಳೆಜ್ಜರವರಿಗೆ, ಮಿತ್ರಂಪಾಡಿ ಪುರಂದರ ರೈ ಪ್ರಾಯೋಜಿತ ಪಂಚಮಿ ಉದ್ಯಮ ಸಿರಿ ಪ್ರಶಸ್ತಿಯನ್ನು ಉದ್ಯಮಿ ಕರುಣಾಕರ ರೈ ದೇರ್ಲರವರಿಗೆ, ಅಗರಿ ಭಂಡಾರಿ ಸಹೋದರರು ಪ್ರಾಯೋಜಿತ ದೇಶ ಸೇವಾ ಅಗರಿ ಪ್ರಶಸ್ತಿಯನ್ನು ಮಾಜಿ ಸೈನಿಕ ರಮಾನಾಥ ರೈ ಪಡ್ಯಂಬೆಟ್ಟುರವರಿಗೆ , ಎನ್.ಚಂದ್ರಹಾಸ್ ಶೆಟ್ಟಿ ಪ್ರಾಯೋಜಿತ ದಿ.ರೇಖಾ ಮುತ್ತಪ್ಪ ರೈ ಮತ್ತು ದಿ.ಜಯಂತ್ ರೈ ಸ್ಮರಣಾರ್ಥ ಕ್ರೀಡಾ ಪ್ರಶಸ್ತಿಯನ್ನು ಉತ್ತಮ ಕ್ರೀಡಾಪಟು ದಯಾನಂದ ರೈ ಕೋರ್ಮಂಡರವರಿಗೆ , ದೇರ್ಲ ಕರುಣಾಕರ ರೈ ಪ್ರಾಯೋಜಿತ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಉತ್ತಮ ಶಿಕ್ಷಕ(ನಿವೃತ್ತ) ಹೆಚ್. ಶ್ರೀಧರ್ ರೈ ಹೊಸಮನೆರವರಿಗೆ, ಅರಿಯಡ್ಕ ಚಿಕ್ಕಪ್ಪ ನಾೖಕ್‌ ಪ್ರತಿಭಾನ್ವಿತ ವಿದ್ಯಾ ಅರಿಯಡ್ಕ ಪ್ರಶಸ್ತಿಯನ್ನು (ಪಿಯುಸಿ ವಿಭಾಗ) ಸಮೃದ್ಧಿ ರೈ ಮಾದೋಡಿ, ಚನಿಲ ತಿಮ್ಮಪ್ಪ ಶೆಟ್ಟಿ ಪ್ರಾಯೋಜಿತ ಪ್ರತಿಭಾನ್ವಿತ ವಿದ್ಯಾ ಚನಿಲ ಪ್ರಶಸ್ತಿಯನ್ನು ಸ್ವಸ್ತಿಕ ಪಿ.ಆರ್.ಪಿಜಕ್ಕಳ ದೋಳ್ವಾಡಿರವರಿಗೆ ಹಾಗೂ ಡಿಎಫ್‌ಓ ಮಂಜುನಾಥ ಶೆಟ್ಟಿ ಪನಡ್ಕ ಸ್ಮರಣಾರ್ಥ ವಿಜಯ ಮಂಜುನಾಥ ಶೆಟ್ಟಿ ಪ್ರಾಯೋಜಿತ ಅರಣ್ಯ ಮಿತ್ರ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈಯವರಿಗೆ ಚಿನ್ನದ ಪದಕದೊಂದಿಗೆ ಸನ್ಮಾನಿಸಿ, ಪ್ರಧಾನ ಮಾಡಲಾಗುವುದು ಎಂದು ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ.

ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಹಾಗೂ ಬಂಟರ ಸಂಘದ ಮಾಧ್ಯಮ್ ಪ್ರಮುಖ್ ಉಮಾಪ್ರಸಾದ್ ರೈ ನಡುಬೈಲುರವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬಂಟರ ಸಂಘದಿಂದ ಸಮಾಜಮುಖಿ ಕಾರ್ಯ
ಪುತ್ತೂರು: ತಾಲೂಕು ಬಂಟರ ಸಂಘವು ಹತ್ತು ಹಲವು ಸಮಾಜಮುಖಿ ಕಾರ‍್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಬಂಟ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯಧನ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆಗೆ ಸಹಕಾರ, ಮನೆ ನಿರ್ಮಾಣ ಮತ್ತು ಮನೆ ದುಸ್ತಿಗೆ, ವಿವಾಹ ಕಾರ‍್ಯಕ್ಕೆ ಮತ್ತು ವೈದ್ಯಕೀಯ ನೆರವನ್ನು ಕೂಡ ನೀಡಲಾಗಿದ್ದು, ಇದೇ ರೀತಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದವರೂ ಕೂಡಾ ಸಾಮಾಜಿಕ ಕಾರ‍್ಯದಲ್ಲಿ ನಿರತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಂಟರ ಸಂಘದಿಂದ ಮತ್ತಷ್ಟು ಸಮಾಜ ಮುಖಿ ಕಾರ‍್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಿದ್ದೇವೆ.
-ಶಶಿಕುಮಾರ್ ರೈ ಬಾಲ್ಯೊಟ್ಟು
ಅಧ್ಯಕ್ಷರು ಬಂಟರ ಸಂಘ ಪುತ್ತೂರು ತಾಲೂಕು

LEAVE A REPLY

Please enter your comment!
Please enter your name here