ಪುತ್ತೂರು: ಪುತ್ತೂರಿನಲ್ಲಿ ಚಿರಪರಿಚಿತಗೊಂಡಿರುವ ಕೊಂಬೆಟ್ಟಿನ ಜಿ.ಎಲ್ ಟ್ರೇಡ್ ಸೆಂಟರ್ ನಲ್ಲಿ ರುವ ‘ಪ್ರಭು ಚರುಂಬುರಿ’ ಯಿಂದ ಆ.12 ರಿಂದ 15 ರ ತನಕ ‘ಚರುಂಬುರಿ ಜಾತ್ರೆ’ ಪ್ರತಿ ದಿನ ಸಂಜೆ 4ರಿಂದ 11ರವರೆಗೆ ನಡೆಯಲಿದೆ ಎಂದು ಪ್ರಭು ಚರುಂಬುರಿ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪುತ್ತೂರಿಗೆ ಈ ಚರುಂಬುರಿ ಹಬ್ಬದ ಕಲ್ಪನೆಯನ್ನು ಪರಿಚಯಿಸಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಚರುಂಬುರಿ ವ್ಯವಹಾರದಲ್ಲಿ ತೊಡಗಿದ್ದು, ಆರಂಭದಲ್ಲಿ ಬಂಟ್ವಾಳದ ಸುತ್ತಮುತ್ತ ಚರುಂಬುರಿ ವ್ಯವಹಾರ ಮಾಡಿಕೊಂಡು ಪುತ್ತೂರಿನಲ್ಲಿ ಶ್ರೀಧರ್ ಭಟ್ ಅಂಗಡಿ ಎದುರು ಒಂದು ದಶಕಕ್ಕೂ ಮೀರಿ ಚರುಂಬುರಿ ವ್ಯವಹಾರ ನಡೆಸಿ, ಕಳೆದ ಮೂರು ವರ್ಷಗಳಿಂದ ಕೊಂಬೆಟ್ಟಿನ ಬಂಟರ ಭವನದ ಎದುಗಡೆಯ ಜೆ.ಎಲ್.ಟ್ರೇಡ್ ಸೆಂಟರ್‌ನಲ್ಲಿ ‘ಪಭು ಚರುಂಬುರಿ’ ಅಂಗಡಿ ಕಾರ್ಯನಿರ್ವಹಿಸುತ್ತಿದ್ದೇವೆ. ಕೊರೋನ ಪೂರ್ವದಲ್ಲಿ ಒಮ್ಮೆ ಚರುಂಬುರಿ ಹಬ್ಬವನ್ನು ಆಯೋಜಿಸಿಗಳಿಸಿದ್ದೇವೆ.. ಇದೀಗ ಚರುಂಬುರಿ ಹಬ್ಬದ ಎರಡನೇ ಹಬ್ಬವಾಗಿ ಆರಂಭಗೊಳ್ಳುತ್ತಿದೆ ಎಂದರು.
ಉದ್ಘಾಟನಾ ಸಮಾರಂಭ:
ಆ.12ರಂದು ಸಂಜೆ ಗಂಟೆ 6.30ಕ್ಕೆ ಅಧಿಕೃತ ಉದ್ಘಾಟನೆ ನಡೆಯಲಿದೆ. ತುಳು ಚಿತ್ರರಂಗ ಹಾಗೂ ರಂಗಭೂಮಿಯ ನಟ ಸತೀಶ್ ಬ೦ದಳೆ ಚರುಂಬುರಿ ಹಬ್ಬ ಉದ್ಘಾಟಿಸಲಿದ್ದಾರೆ. ಭಟ್ ಆ್ಯಂಡ್ ಭಟ್ ಯೂಟ್ಯೂಬ್ ವಾಹನಿಯ ಸ್ಥಾಪಕ ಸುದರ್ಶನ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತಿ ಘೋಷಿಸಿದ ಪುತ್ತೂರಿನ ಡಾ.ಶಿವರಾಮ ಭಟ್ ಕ್ಲಿನಿಕ್ ಕಂಪೌಂಡರ್ ನರಸಿಂಹ ಭಟ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ ಎಂದು ರಾಜೇಶ್ ಪ್ರಭು ತಿಳಿಸಿದ್ದಾರೆ.
ಹಳೆಕಾಲದ ಚರುಂಬರಿ ಆಕರ್ಷಣೆ:
ಹಳೆ ಕಾಲದಲ್ಲಿ ಚರುಂಬುರಿ ಮಾಡುತ್ತಿದ್ದ ವಿಧಾನ ಹಾಗೂ ಆಗಿನ ರುಚಿಯ ಚರುಂಬುರಿಯನ್ನು ಈಗಿನ ಜನಕ್ಕೆ ಒದಗಿಸುವ ಪ್ರಯತ್ನವೂ ಈ ಬಾರಿಯ ತರುಂಬುರಿ ಹಬ್ಬದಲ್ಲಿ ನಡೆಯಲಿದೆ. ನೆಲದ ಮೇಲೆ ಕುಳಿತು, ಗ್ಯಾಸ್ ಲೈಟ್ ಉರಿಸಿ, ಆಧುನಿಕ ರುಚಿವರ್ಧಕ ಬಳಸದ ಮಾಡುವ ಚರುಂಬುರಿ ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಮೂಡಿ ಬರಲಿದೆ. ಇಷ್ಟಲ್ಲದೆ ರೂ.20 ರಿಂದ ತೊಡಗಿ ರೂ.50 ರ ತನಕ ಚರುಂಬುರಿಗಳು ಈ ಹಬ್ಬದಲ್ಲಿ ಲಭ್ಯವಿದೆ ಎಂದು ರಾಜೇಶ್ ಪ್ರಭು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಭು ಚರುಂಬುರಿಯ ಆದರ್ಶ ವಿ. ಮಹೇಶ್, ದೇವಿಪ್ರಸಾದ್, ವನಿತಾ ಉಪಸ್ಥಿತರಿದ್ದರು.
ಪಾರ್ಕಿಂಗ್ ಹಾಗೂ ಆಸನ ವ್ಯವಸ್ಥೆ:
ಈ ಬಾರಿಯ ಚರುಂಬುರಿ ಹಬ್ಬಕ್ಕೆ ಆಗಮಿಸುವವರಿಗಾಗಿ ಕೊಂಬೆಟ್ಟಿನ ಪ್ರಭು ಚರುಂಬುರಿ ಅಂಗಡಿಯ ಎದುರಿನ ಬಂಟರ ಭವನದ ಪ್ರಾಂಗಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ. ಅಂತೆಯೇ ಸುಮಾರು 200 ಜನ ಕುಳಿತು, ಚರುಂಬುರಿ ಸೇವಿಸುವ ವ್ಯವಸ್ಥೆಯನ್ನು ಜಿ.ಎಲ್.ಸೆಂಟರ್ ಮಾಳಿಗೆಯಲ್ಲಿ ಒದಗಿಸಿಕೊಡಲಾಗುತ್ತಿದೆ ಎಂದು ರಾಜೇಶ್ ಪ್ರಭು ತಿಳಿಸಿದ್ದಾರೆ.