ಆ. 13: ವಿಶ್ವಕರ್ಮ ಪೂಜಾ ಪೂರ್ವಭಾವಿ ಸಭೆ

0

ಪುತ್ತೂರು: ಬೊಳ್ವಾರು ವಿಶ್ವಕರ್ಮ ಯುವ ಸಮಾಜದ ಆಶ್ರಯದಲ್ಲಿ ವಿಶ್ವಬ್ರಾಹ್ಮಣ ಸೇವಾ ಸಂಘದ ಸಹಕಾರದಲ್ಲಿ ನಡೆಯಲಿರುವ ವಿಶ್ವಕರ್ಮ ಪೂಜೆಯ ಹಿನ್ನೆಲೆಯಲ್ಲಿ ಆ. 13ರಂದು ಬೆಳಿಗ್ಗೆ 10.30ಕ್ಕೆ ಬೊಳ್ವಾರು ವಿಶ್ವಕರ್ಮ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

ಸೆ. 17ರಂದು ವಿಶ್ವಕರ್ಮ ಪೂಜೆ ನಡೆಯಲಿದ್ದು, ವಿದ್ಯಾರ್ಥಿ ವೇತನ‌ ವಿತರಣೆ, ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ ಹಾಗೂ ದೇವಶಿಲ್ಪಿ ವಿಶ್ವಕರ್ಮ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದ ರೂಪುರೇಷೆ ಹಾಗೂ ಸಿದ್ಧತೆಗಳ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ವಿಶ್ವಬ್ರಾಹ್ಮಣ ಸೇವಾ ಸಂಘ ಹಾಗೂ ವಿಶ್ವಕರ್ಮ ಯುವ ಸಮಾಜದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here