ಸ್ವಾತಂತ್ರ್ಯೋತ್ಸವಕ್ಕೆ ಇಲಾಖೆಯವರು ಹಣ ಸಂಗ್ರಹಿಸುವುದು ಬೇಡ

0

ಪೂರ್ತಿ ಖರ್ಚು ನಾನು ನೀಡುತ್ತೇನೆ: ಶಾಸಕ ಅಶೋಕ್ ರೈ ಸೂಚನೆ


ಪುತ್ತೂರು; ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಈ ಬಾರಿಯ 76 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಕಿಲ್ಲೆ ಮೈದಾನದಲ್ಲಿ ಎಂದಿನಂತೆ ನಡೆಯಲಿದ್ದು ಬಳಿಕ ಪುರಭವನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ. ಸ್ವಾತಂತ್ರ್ಯೋತ್ಸವ ದಿನದಂದು ಎಲ್ಲಾ ಖರ್ಚುಗಳನ್ನು ನಾನೇ ನೀಡುತ್ತೇನೆ ಎಂದು ಶಾಸಕರಾದ ಅಶೋಕ್ ರೈ ಅಧಿಕಾರಿಗಳಿಗೆ ವಾಗ್ದಾನ ನೀಡಿದ್ದು ಖರ್ಚಿನ ಮೊತ್ತವನ್ನು ಈಗಾಗಲೇ ಅಧಿಕಾರಿಗಳ ಕೈಗೆ ನೀಡಿದ್ದಾರೆ.


ಪ್ರತೀ ಬಾರಿ ಸ್ವಾತಂತ್ರ್ಯೋತ್ಸವ ದಿನದ ಖರ್ಚಿನ ಹಣವನ್ನು ವಿವಿಧ ಇಲಾಖೆಯಿಂದ ಒಟ್ಟುಗೂಡಿಸಿ ಅದನ್ನು ಬಳಸುತ್ತಿದ್ದರು. ಸ್ವಾತಂತ್ರ್ಯೋತ್ಸವ ಆಚರಣಾ ಪೂರ್ವಭಾವಿ ಸಭೆಯಲ್ಲಿ ಶಾಸಕರಿಗೆ ಅಧಿಕಾರಿಗಳು ಈ ವಿಚಾರವನ್ನು ತಿಳಿಸಿದ್ದರು. ಇಲಖೆಗಳಿಂದ ಹಣ ಒಗ್ಗೂಡಿಸುವುದು ಬೇಡ ಅದು ಕೂಡಾ ಭ್ರಷ್ಟಚಾರದ ಒಂದು ಭಾಗವಾಗಿದೆ ಯಾವುದೇ ಕಾರಣಕ್ಕೂ ಯಾವ ಇಲಾಖೆಯವರು ಕೂಡಾ ಸ್ವಾತಂತ್ರ್ಯೋತ್ಸವದ ಖರ್ಚಿಗೆ ಹನ ನೀಡುವುದು ಬೇಡ ಎಷ್ಟು ಖರ್ಚಾಗುತ್ತದೆ ಎಂದು ತಿಳಿಸಿ ಆ ಮೊತ್ತವನ್ನು ನಾನು ನೀಡುವುದಾಗಿ ಶಾಸಕರು ತಿಳಿಸಿದ್ದಾರೆ. ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಸ್ವಂತ ಹಣದಿಂದ ಸರಕಾರಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದು ಶಾಸಕರ ನಡೆಗೆ ಮತ್ತು ಭ್ರಷ್ಟಚಾರದ ವಿರೋಧಿ ನಿಲುವಿಗೆ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here