ವಿದ್ಯಾಭಾರತಿ ರಾಜ್ಯಮಟ್ಟದ ಖೋ ಖೋ ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ನೆಲ್ಯಾಡಿ ಶ್ರೀರಾಮ ಶಾಲಾ ತಂಡಕ್ಕೆ ಪ್ರಥಮ ಸ್ಥಾನ

0

ನೆಲ್ಯಾಡಿ: ಶ್ರೀ ಸರಸ್ವತಿ ವಿದ್ಯಾನಿಕೇತನ ಬೊಮ್ಮಸಂದ್ರ ಬೆಂಗಳೂರು ಇಲ್ಲಿ ಆ.12 ಮತ್ತು 13ರಂದು ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯ(ಪ್ರಾಂತ) ಮಟ್ಟದ ಖೋ ಖೋ ಪಂದ್ಯಾಟದಲ್ಲಿ ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿನಿಯರು ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಕ್ಷೇತ್ರಮಟ್ಟದ ಪಂದ್ಯಾಟ ಆಯ್ಕೆಯಾಗಿದ್ದಾರೆ.
ಶ್ರೀರಾಮ ಶಾಲಾ ಬಾಲಕಿಯರ ತಂಡವು ಬೆಂಗಳೂರು ನಗರ ಜಿಲ್ಲೆಯೊಂದಿಗೆ ಸೆಣಸಾಡಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸೆ.2 ಮತ್ತು 3ರಂದು ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ಕ್ಷೇತ್ರ ಮಟ್ಟದ ಪಂದ್ಯಾಟ ನಡೆಯಲಿದೆ.

LEAVE A REPLY

Please enter your comment!
Please enter your name here