ಮರಾಟಿ ಸಮಾಜ ಸೇವಾ ಸಂಘ ಪಡುಮಲೆ ಬಡಗನ್ನೂರು ಪಟ್ಟೆ ಇದರ ಮಹಾಸಭೆ, ಆಟ ಐಸಿರಿ, ವನಮಹೋತ್ಸವ, ಸನ್ಮಾನ

0

ಬಡಗನ್ನೂರು: ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ದ. ಕ. ಇದರ ಗಾಮೀಣ ಶಾಖೆ ಮರಾಟಿ ಸಮಾಜ ಸೇವಾ ಸಂಘ ಪಡುಮಲೆ ಬಡಗನ್ನೂರು ಇದರ ವಾರ್ಷಿಕ ಮಹಾಸಭೆ, ಆಟ ಐಸಿರಿ, ವನಮಹೋತ್ಸವ, ಸಾಧಕರಿಗೆ ಸನ್ಮಾನ ಆ.13ರಂದು ಪಟ್ಟೆ ನೀಲಗಿರಿ ನಾರಾಯಣ ನಾಯ್ಕ ಇವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನರಿಮೊಗರು  ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ  ಮಹಾಲಿಂಗ ನಾಯ್ಕ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘವನ್ನು ಹುಟ್ಟು ಹಾಕುವುದು ಸುಲಭ, ಆದರೆ ಉಳಿಸಿ ಬೆಳೆಸುವುದು ಕಷ್ಟ. ಪಡುಮಲೆ ಮರಾಟಿ ಗ್ರಾಮೀಣ ಶಾಖೆ ಎಲ್ಲಾ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಮಾಡಿಕೊಂಡು ಬರುತ್ತಿದ್ದು, ಇತರ ಸಂಘಗಳಿಗೆ ಮಾದರಿಯಾಗಿದೆ. ಮುಂದೆ ಉತ್ತಮ ಕಾರ್ಯಕ್ರಮ ಮಾಡುವ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಶುಭ ಹಾರೈಸಿದರು.

ಅಥಿತಿಯಾಗಿ ಭಾಗವಹಿಸಿದ್ದ ಪುತ್ತೂರು, ಕೊಂಬೆಟ್ಟು ಮ.ಸ.ಸೇ.ಸಂಘದ ಅಧ್ಯಕ್ಷ  ಮಂಜುನಾಥ ಎನ್. ಎಸ್. ಮಾತನಾಡಿ, ಸಮಾಜ ಬಂಧುಗಳ ಸಹಕಾರ ಇದ್ದರೆ ಮಾತ್ರ ಸಮರ್ಥ ಸಂಘಟನೆ  ಕಟ್ಟಲು ಸಾಧ್ಯ. ಇದಕ್ಕೆ ನಿದರ್ಶನ ಪಡುಮಲೆ ಮರಾಟಿ ಸೇವಾ ಸಂಘ. ಸಂಘದ ಗತಕಾಲದ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದರ ಪ್ರತಿಯನ್ನು ಇತರ ಸಂಘಗಳಿಗೆ ನೀಡುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮರಾಟಿ ಮಾತೃಸಂಘದ ಪರವಾಗಿ ಅಭಿನಂದನೆ ಸಲ್ಲಿಸಿದ ಅವರು ಸಂಘದ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವುದು, ಸಂಘದ ಬಗ್ಗೆ ನಿರಂತರ ಚಿಂತನೆ ಮಾಡಿ ಸಮಯ ನೀಡುವವರು ನಾಯಕನಾಗುತ್ತಾನೆ. ಈ ನಿಟ್ಟಿನಲ್ಲಿ ಪ್ರತಿ ಮನೆಯಿಂದ ಒಬ್ಬ ಸದಸ್ಯ ಮಾತೃ ಸಂಘದ ಸದಸ್ಯರಾಗುವ ಮೂಲಕ ಸಂಘವನ್ನು ಬೆಳೆಸಬೇಕು. ಪ್ರತಿ ಮನೆಯಿಂದ ವರ್ಷದಲ್ಲಿ ಒಂದು ಭಾರಿ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ ಅವರು ಆ.15 ರಂದು ಸ್ವಾತಂತ್ರ್ಯದ ಧ್ವಜಾರೋಹಣ ಮತ್ತು ಆಟಿಕೂಟ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಿವೃತ್ತ BSNL ಉದ್ಯೋಗಿರಾಮ ನಾಯ್ಕ ಪೆರಿಗೇರಿ, ಪಡುಮಲೆ ಮರಾಟಿ ಸೇವಾ ಸಂಘದ ಶಿಸ್ತು ಬದ್ಧ ಕಾರ್ಯಕ್ರಮ  ಅನುಕರಣೀಯವಾದದ್ದು, ಕೊಂಬೆಟ್ಟು ಮರಾಟಿ ಸೇವಾ ಸಂಘದ ಎಲ್ಲಾ ಕಾರ್ಯಕ್ರಮಕ್ಕೆ ಈ ಭಾಗದ ಸಮಾಜ ಬಾಂಧವರು ಪಾಲ್ಗೊಳ್ಳಬೇಕು. ಪ್ರತಿ ಮನೆಯ ಸದಸ್ಯರು ಸಂಘದ ಅಜೀವ ಸದಸ್ಯತ್ವ ಪಡೆದುಕೊಂಡು ಮಾತೃ ಸಂಘವನ್ನು ಬೆಳೆಸುವಲ್ಲಿ ಕೈಜೋಡಿಸುವಂತೆ ಕರೆ ನೀಡಿದರು.

ಸಭೆಯು ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ  ಕೇಶವ ಪ್ರಸಾದ್ ನೀಲಗಿರಿ  ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಬಾಂಧವರ ಪರಸ್ಪರ ಸಹಕಾರದಿಂದ ಮಾತ್ರ ಸಂಘದ ಬೆಳವಣಿಗೆ ಸಾಧ್ಯ ಎಂದು ಹೇಳಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಯಮುನಾ ವೈಕೆ ನಾಯ್ಕ  ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿದರು. ಇದೇ ವೇಳೆ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ  ಕಿಶೋರಿ ನಾಯ್ಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗೋಪಾಲ ನಾಯ್ಕ ದೊಡ್ಡಡ್ಕ,  ಎನ್ ಆರ್ ಸಿಸಿಯಲ್ಲಿ 32 ವರ್ಷ ಸೇವೆ ಸಲ್ಲಿಸಿದ ನಾರಾಯಣ ನಾಯ್ಕ ದಂಪತಿಗಳನ್ನು ಹಾಗೂ ಕೊಂಬೆಟ್ಟು ಮರಾಟಿ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆ ಗೊಂಡ ನ್ಯಾಯವಾದಿ ಮಂಜುನಾಥ ಎಂ.ಎಸ್ ಇವರನ್ನು ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮ ಆರಂಭದಲ್ಲಿ ನಿವೃತ್ತ BSNL ಉದ್ಯೋಗಿರಾಮ ನಾಯ್ಕ ಪರಿಗೇರಿ, ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ಅಪ್ಪಯ್ಯ ನಾಯ್ಕ ತಲೆಂಜಿ ಸ್ವಾಗತಿಸಿದರು,  ವೈ. ಕೆ. ನಾಯ್ಕ ಪಟ್ಟೆ ಪ್ರಾಸ್ತಾವಿಕ ಮಾತನಾಡಿದರು. ಕುಸುಮಾವತಿ ಎಸ್  ನಾಯ್ಕ ಪಟ್ಟೆ ಗತ ವರ್ಷದ ವರದಿ ವಾಚಿಸಿದರು. ಕೋಶಾಧಿಕಾರಿ ಸುಂದರ ನಾಯ್ಕ ಲೆಕ್ಕಾಚಾರ ಮಂಡಿಸಿ, ವಂದಿಸಿದರು. ರೇಖಾನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೊಂಬೆಟ್ಟು ಮಾತೃ ಸಂಘದ ಮಾಜಿ ಅಧ್ಯಕ್ಷ  ಶಿವಪ್ಪ ನಾಯ್ಕ ನೆಹರು ನಗರ, ಪೂವಪ್ಪ ನಾಯ್ಕ ಕುಂಞಕುಮೇರು, ಕೊಂಬೆಟ್ಟು ಮಾತೃ  ಸಂಘದ ಕಾರ್ಯದರ್ಶಿ ಅಶೋಕ್ ಬಲ್ನಾಡು, ಕರುಣಾಕರ ಅಲೆಟ್ಟಿ, ಬಾಬು ನಾಯ್ಕ ಕೊಳ್ತಿಗೆ, ರಾಜೇಶ್ ಪಾಪೆಮಜಲು,  ಸೀಮಂತಿನಿ ನವನೀತ್  ಬಡಾವು ಪುತ್ತೂರು,  ದಿಲೀಪ್ ಉಪ್ಪಳಿಗೆ ಹಾಗೂ ಪಡುಮಲೆ ಮರಾಟಿ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಊರಿನವರು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here