ರೋಟರಿ ಎಲೈಟ್ ನಿಂದ ದೀಪಾವಳಿ ಸಂಭ್ರಮ-ಕುಟುಂಬ ಮಿಲನ

0

ಪುತ್ತೂರು: ಸೇವಾ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ರೋಟರಿ ಸಂಸ್ಥೆಗಳು ನೊಂದವರ ಬದುಕನ್ನು ಬೆಳಗಿಸುವ ಕಾರ್ಯಮಾಡುತ್ತಿದೆ ಎಂದು ಖ್ಯಾತ ಹಾಸ್ಯಕಲಾವಿದ ವಿಠಲ್ ನಾಯಕ್ ಕಲ್ಲಡ್ಕ ಹೇಳಿದರು.

ರೋಟರಿ ಪುತ್ತೂರು ಎಲೈಟ್ ಆಶ್ರಯದಲ್ಲಿ‌ ಸುದಾನ ಎಡ್ವರ್ಡ್ ಹಾಲ್‌ನಲ್ಲಿ‌ ನಡೆದ “ದೀಪಾವಳಿ ಸಂಭ್ರಮ-ಕುಟುಂಬ ಮಿಲನ‌” ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ‌ ಭಾಗವಹಿಸಿ ಮಾತನಾಡಿದರು. ದೀಪಾವಳಿಯ ಸಂಭ್ರಮ ಎಲ್ಲರ‌ ಮನೆ ಮನ ಬೆಳಗಲಿ, ಉತ್ತಮ‌ ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸಬೇಕು, ಅದಕ್ಕೆ ಕೌಟುಂಬಿಕವಾಗಿ ಹಿರಿಯರು ಪಾಲಿಸಬೇಕಾದ ಹಲವು ದೃಷ್ಟಾಂತಗಳನ್ನು ಹಾಸ್ಯ ಸನ್ನಿವೇಶಗಳ‌ ಮುಖೇನ‌ ತೆರೆದಿಟ್ಟರು.

ರೋಟರಿ ಪುತ್ತೂರು ಎಲೈಟ್ ಅಧ್ಯಕ್ಷರಾದ ಸಿಲ್ವಿಯಾ ಡಿಸೋಜ‌ ಸಭಾಧ್ಯಕ್ಷತೆ ವಹಿಸಿದ್ದರು, ದೀಪಾವಳಿ ಸಂಭ್ರಮದ ಗುರಿಕ್ಕಾರ ಅಬ್ದುಲ್‌ ರಝಾಕ್‌ ಕಬಕಕಾರ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪದ್ಮಾವತಿ ವಾರದ ವರದಿ ಮಂಡಿಸಿದರು. ಭುವನೇಶ್ವರಿ‌ ಪ್ರಾರ್ಥಿಸಿದರು.  ಕೋಶಾಧಿಕಾರಿ ಹರಿಣಿ‌ ಪುತ್ತೂರಾಯ ವಂದಿಸಿದರು.ಸದಸ್ಯ ಮೌನೇಶ ವಿಶ್ವಕರ್ಮ ಕಾರ್ಯಕ್ರಮ‌ ನಿರ್ವಹಿಸಿದರು. ಸದಸ್ಯರಾದ ಬಾಲು ನಾಯ್ಕ್ ಸಹಕರಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ರೋಟರಿ‌ ಪುತ್ತೂರು ಎಲೈಟ್ ಸದಸ್ಯರು ಕುಟುಂಬ ಸಮೇತರಾಗಿ ಹಣತೆ ಬೆಳಗಿಸುವುದರ ಮೂಲಕ‌ ದೀಪಾವಳಿ  ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.

LEAVE A REPLY

Please enter your comment!
Please enter your name here