ಬಲ್ನಾಡು: ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಬಲ್ನಾಡು ಇದರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಗ್ರಾಮ ಸಮಿತಿ ಬಲ್ನಾಡು, ಮಾದರಿ ಗ್ರಾಮ ಸಮಿತಿ ಬಲ್ನಾಡು,ಯುವ ಘಟಕ ,ಮಹಿಳಾ ಘಟಕ ಬಲ್ನಾಡು ಇದರ ಸಹಕಾರದೊಂದಿಗೆ ಆಟಿ ಆಚರಣೆ – 2023 ಕಾರ್ಯಕ್ರಮ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಕ್ಕಳಿಗೆ ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ, ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ಆಟೋಟ ಸ್ಪರ್ಧೆಯು ಶ್ರೀ ಭಟ್ಟಿ ವಿನಾಯಕ ಸಭಾಭವನ ಬಲ್ನಾಡು ಜು.30 ರಂದು ನಡೆಯಿತು.
ಉದ್ಘಾಟನಾ ಕಾರ್ಯಕ್ರಮ
ಕಾರ್ಯಕ್ರಮವನ್ನು ಬಲ್ನಾಡು ಕಟ್ಟೆಮನೆಯ ಪರಮೇಶ್ವರ ಗೌಡ ದೀಪ ಬೆಳಗಿಸಿ, ಚೆನ್ನಮಣೆ ಅಡುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಒಕ್ಕಲಿಗ ಗೌಡ ಸೇವಾ ಸಂಘ ಬಲ್ನಾಡು ಗ್ರಾಮ ಸಮಿತಿ ಇದರ ಅಧ್ಯಕ್ಷರಾದ ಮಾಧವ ಗೌಡ ಕಾಂತಿಲ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಸತೀಶ ಗೌಡ ಒಳಗುಡ್ಡೆ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಬ್ರಹ್ಮರಕೋಡಿ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಭಾ ಕಾರ್ಯಕ್ರಮ,ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾದರಿ ಗ್ರಾಮ ಸಮಿತಿ ಬಲ್ನಾಡು ಇದರ ಅಧ್ಯಕ್ಷರಾದ ನಾರಾಯಣ ಗೌಡ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷ ಡಿ ವಿ ಮನೋಹರ್, ಬಂಟ್ವಾಳ ಒಕ್ಕಲಿಗ ಗೌಡ ಯಾನೆ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಮೋನಪ್ಪ ಗೌಡ,ಒಕ್ಕಲಿಗ ಸ್ವ ಸಹಾಯ ಒಕ್ಕೂಟ ದ ಉಪ್ಪಿನಂಗಡಿ ವಲಯಧ್ಯಕ್ಷರಾದ ಗಂಗಯ್ಯ ಗೌಡ ನೆಕ್ಕಿಲಾಡಿ, ಪುತ್ತೂರು ನಗರಸಭಾ ಸದಸ್ಯರಾದ ಪೂರ್ಣಿಮಾ,ಸಂಪನ್ಮೂಲ ವ್ಯಕ್ತಿಯಾಗಿ ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲರು ಗೋಪಾಲಕೃಷ್ಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ವೇದಿಕೆಯಲ್ಲಿ ಒಕ್ಕಲಿಗ ಗೌಡ ಗ್ರಾಮ ಸಮಿತಿ ಅಧ್ಯಕ್ಷರಾದ ಮಾಧವ ಗೌಡ ಕಾಂತಿಲ, ಒಕ್ಕಲಿಗ ಸ್ವ ಸಹಾಯ ಸಂಘಗಳ ಬಲ್ನಾಡು ಒಕ್ಕೂಟದ ಅಧ್ಯಕ್ಷೆ ಗೀತಾ ಒಳಗುಡ್ಡೆ, ಯುವ ಘಟಕದ ಸಂತೋಷ್ ಒಳಗುಡ್ಡೆ, ಮಹಿಳಾ ಘಟಕದ ಅಧ್ಯಕ್ಷ ಚಂದ್ರಾವತಿ ಮೂದಲಾಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 2022-2023 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ನಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 1ನೇ ತರಗತಿಯಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ಹಾಗೂ ಬಲ್ನಾಡು ಒಕ್ಕೂಟದ ಒಟ್ಟು ಸ್ವಸಹಾಯ ಸಂಘಗಳ ಪೈಕಿ ಉತ್ತಮ ಒಂದು ಸ್ವಸಹಾಯ ಸಂಘವಾದ ವಿನಾಯಕ ಸ್ವ ಸಹಾಯ ಸಂಘವನ್ನು ಗುರುತಿಸಿ ಸದಸ್ಯರನ್ನು ಗೌರವಿಸಲಾಯಿತು. ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ ನಡೆದ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ಗೌರವಾರ್ಪಣೆ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಪುಟ್ಟಣ್ಣ ಗೌಡ ಕುಕ್ಕುತ್ತಡಿ ಹಾಗೂ ಶೀನಪ್ಪ ಗೌಡ ಮೂದಲಾಜೆ ಮತ್ತು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷ್ಣಪ್ಪಗೌಡ ಓಟೆ, ಶೇಶಪ್ಪ ಗೌಡ ಬ್ರಹ್ಮರಕೋಡಿ, ಜಗದೀಶ್ ಗೌಡ ಕಲ್ಲಾಜೆ, ಸುರೇಶ ಗೌಡ ಮೂದಲಾಜೆ, ಉಮೇಶ್ ಗೌಡ ಬ್ರಹ್ಮರಕೋಡಿ, ಲಕ್ಷ್ಮೀಶ ಗೌಡ ಕೋರೋಲ್ತಡ್ಕ ಇವರುಗಳನ್ನು ಗೌರವಿಸಲಾಯಿತು.
ಕಾಯಕ್ರಮದಲ್ಲಿ ಮಾಧವ ಗೌಡ ಕಾಂತಿಲ ಸ್ವಾಗತಿಸಿ, ಗೀತಾ ಒಳಗುಡ್ಡೆ ವಂದಿಸಿದರು, ಟ್ರಸ್ಟ್ ನ ಮೇಲ್ವಿಚಾರಕಾರದ ಸುಮಲತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೆಳಿಗ್ಗೆ ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಉಪಹಾರ ಹಾಗೂ ಮಧ್ಯಾಹ್ನ ಭೋಜನ ನಡೆಯಿತು.