ಪುತ್ತೂರು: ತಾಲೂಕಿನ ಸೇಡಿಯಾಪು ಕಜೆ ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಭವ್ಯ ವಿಶ್ವನಾಥ್ ರವರು ಧ್ವಜಾರೋಹಣ ಮಾಡಿದರು. ನ್ಯಾಯವಾದಿ ಭಾಸ್ಕರ್ ಕೋಡಿಂಬಾಳರವರು ಮುಖ್ಯ ಅತಿಥಿಯಾಗಿ ಆಗಮಿಸಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಡೆನ್ನಿಸ್ ಮಸ್ಕರೇನ್ಹಸ್ , ಪಂಚಾಯತ್ ಸದಸ್ಯ ಶೀನಪ್ಪ ಕುಲಾಲ್, ಶ್ರೀ ಕೃಷ್ಣ ಯುವಕ ಮಂಡಲ ಅಧ್ಯಕ್ಷರು ಮತ್ತು ಸದಸ್ಯರು, ಸದಾಶಿವ ಕಾಲೋನಿ ಅಧ್ಯಕ್ಷ ಸುಬ್ರಮಣ್ಯ ಮತ್ತು ಸದಸ್ಯರು ,ಮಕ್ಕಳ ಪೋಷಕರು , ಶ್ರೀ ಶಕ್ತಿ ಸಂಘದ ಸದಸ್ಯರು ಊರಿನ ಮಕ್ಕಳು ಮತ್ತು ಜನರು ಭಾಗವಹಿಸಿದರು .
ಶ್ರೀ ಕೃಷ್ಣ ಯುವಕ ಮಂಡಲ ಅಧ್ಯಕ್ಷರಾದ ರಾಜೇಶ್ ಗೌಡ ಗೋಳ್ತಿಲ ಮತ್ತು ಸದಸ್ಯರ ವತಿಯಿಂದ ಮಕ್ಕಳಿಗ ಪುಸ್ತಕ ಮತ್ತು ಕೆಲವು ಕಲಿಕಾ ವಸ್ತುಗಳನ್ನು ವಿತರಿಸಲಾಯಿತು. ಶ್ರೀ ಶಕ್ತಿ ಸಂಘದ ಸದಸ್ಯರು, ಪಂಚಾಯತ್ ಸದಸ್ಯರು ,ಮಕ್ಕಳ ಅಭಿವೃದ್ದಿ ಸಮಿತಿಯ ಸದಸ್ಯರ ವತಿಯಿಂದ ಅಂಗನವಾಡಿಗೆ ಪೂರಕವಾದ ಕೆಲವು ವಸ್ತುಗಳನ್ನು ವಿತರಿಸಲಾಯಿತು. ಬಾಲವಿಕಾಸ ಸಮಿತಿಯ ಸದಸ್ಯರಾದ ಮೆಲ್ವಿನ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು . ಪೋಷಕರು ಮತ್ತು ಊರಿನ ಬಂಧು ಮಿತ್ರರು ಸಿಹಿತಿಂಡಿ ವಿತರಿಸಿದರು.
ಪುಟಾಣಿ ಮಕ್ಕಳು “ಭವ್ಯ ಭಾರತ ” ದೇಶಭಕ್ತಿ ಗೀತೆ ಹಾಡಿದರು .ಅಂಗನವಾಡಿ ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಣೆ ಮಾಡಿ, ವಂದಿಸಿದರು .