ಕೊಯಿಲ ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ನಿವೃತ್ತ ಯೋಧ, ಪೊಲೀಸ್ ಅಧಿಕಾರಿಗೆ ಗೌರವಾರ್ಪಣೆ

0

ರಾಮಕುಂಜ: ಕೊಯಿಲ ಗ್ರಾಮ ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್ ನೆರವೇರಿಸಿದರು. ಸಮಾರಂಭದಲ್ಲಿ ನಿವೃತ್ತ ಯೋಧ ಚೆನ್ನಪ್ಪ ಗೌಡ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಕುಶಾಲಪ್ಪ ಗೌಡರವರಿಗೆ ಗೌರವಾರ್ಪಣೆ ಸಲ್ಲಿಸಿ, ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯರಾದ ಯತೀಶ್, ಸೀತಾರಾಮ, ನಝೀರ್ ಪೂರಿಂಗ, ಪುಷ್ಪ, ಶಶಿಕಲಾ, ಜೊಹರಾ, ಭಾರತಿ, ಸಫೀಯ, ಸಂಘ ಸಂಸ್ಥೆ
ಪದಾಧಿಕಾರಿಗಳಾದ ಯಾಕೂಬ್, ಪುರುಷೋತ್ತಮ, ಅಶ್ರಫ್, ಅಬೂಬಕ್ಕರ್ ಸಿದ್ದಿಕ್, ಅಂಗನವಾಡಿ ಕಾರ್‍ಯಕರ್ತೆ ಜಯಲಕ್ಷ್ಮಿ, ಗುಣವತಿ, ಆತಿಕಾ, ಪಂಚಾಯಿತಿ ಸಿಬ್ಬಂದಿಗಳಾದ ರಾಜೇಂದ್ರ, ಮೀನಾಕ್ಷಿ, ರುಕ್ಮಯ, ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂದೇಶ್ ಸ್ವಾಗತಿಸಿ, ಕಾರ್‍ಯದರ್ಶಿ ಪಮ್ಮ ವಂದಿಸಿದರು.

LEAVE A REPLY

Please enter your comment!
Please enter your name here