ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಧ್ಯಕ್ಷೆ ಲಕ್ಷ್ಮೀ ಕೆ.ಜಿ ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದರು. ಸಂಘದ ನಿರ್ದೇಶಕ ವಸಂತ ಕುಮಾರ್ ರೈ ಕೆ ಸ್ವಾತಂತ್ರ್ಯೋತ್ಸವ ಶುಭ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಗಂಗಾಧರ ಗೌಡ ಕೆ, ವಸಂತ ಕುಮಾರ್ ರೈ ಕೆ, ವೆಂಕಟ್ರಮಣ ಕೆ.ಎಸ್.ತೀರ್ಥಾನಂದ ಡಿ, ಸತೀಶ್ ಪಾಂಬಾರು, ಅಣ್ಣಪ್ಪ ನಾಯ್ಕ ಬಿ, ಶಿವರಾಮ, ಗುರುವಪ್ಪ ಎಂ, ನಾಗವೇಣಿ ಕೆ.ಕೆ, ವಿಶಾಲಾಕ್ಷಿ, ಶ್ರೀಧರ ಗೌಡ ಅಂಗಡಿಹಿತ್ಲು,ಮಾಜಿ ಅಧ್ಯಕ್ಷ ಕೆ.ಎಸ್.ಪ್ರಮೋದ್, ರೈತ ಮಿತ್ರಕೂಟದ ಅಧ್ಯಕ್ಷ ಮುರಳೀಧರ ಎಸ್.ಪಿ, ನವೋದಯ ಒಕ್ಕೂಟದ ಅಧ್ಯಕ್ಷ ಅಶೋಕ್ ಒರ್ಕೊಂಬು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಂಸಾವತಿ ಕೆ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
