ಪುತ್ತೂರು: ಪಣೆಮಜಲು ರಹ್ಮಾನಿಯಾ ಜುಮಾ ಮಸೀದಿ ವಠಾರದಲ್ಲಿ 77 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಜಮಾಅತ್ ಅಧ್ಯಕ್ಷ ಮೂಸಾ ಹಾಜಿ ಬೇರಿಕೆ ಧ್ವಜಾರೋಹಣಗೈದರು. ದುವಾ ನೆರವೇರಿಸಿದ ಖತೀಬರಾದ ಉಮ್ಮರ್ ದಾರಿಮಿಯವರು ಸ್ವಾತಂತ್ರ್ಯೋತ್ಸವದ ಮಹತ್ವಗಳನ್ನು ವಿವರಿಸಿದರು. ಸಾಹಿತಿ ಹೈದರ್ ಆಲಿ ಐವತ್ತೊಕ್ಲು ಸಂದೇಶ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಜಮಾಅತ್ ಉಪಾಧ್ಯಕ್ಷ ಇಸ್ಮಾಯಿಲ್ ಪಣೆಮಜಲು, ಪ್ರ.ಕಾರ್ಯದರ್ಶಿ ಸಂಶುದ್ದೀನ್ ಹಾಜಿ ಬೇರಿಕೆ, ಕಾರ್ಯದರ್ಶಿಗಳಾದ ರಫೀಕ್ ಪಳ್ಳತಮೂಲೆ, ಅಶ್ರಫ್ ಸರ್ವೆ, ಕೋಶಾಧಿಕಾರಿ ಹಂಝ ಸಿರಾಜ್, ಸದಸ್ಯರಾದ ಯೂಸುಫ್ ಹಾಜಿ ಬೇರಿಕೆ, ಸುಲೈಮಾನ್ ಪಳ್ಳತಮೂಲೆ, ಉಮ್ಮರಬ್ಬ ಮುಲಾರ್, ಅಲ್ ನಜಾತ್ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ರಫೀಕ್ ಟಾಸ್ಕೋ, ಇಬ್ರಾಹಿಂ ಪಣೆಮಜಲು, ಸಿದ್ದೀಕ್ ಪಳ್ಳತಮೂಲೆ, ಸದರ್ ಮುಹಲ್ಲಿಂ ಶಾಫಿ ಅಝ್ಹರಿ ಮೊದಲಾದವರು ಉಪಸ್ಥಿತರಿದ್ದರು. ಮದರಸ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಹಾಡಿ ಧ್ಜಜವಂದನೆಗೈದರು. ಇಸ್ಮಾಯಿಲ್ ಪಳ್ಳತಮೂಲೆ ಸ್ವಾಗತಿಸಿದರು. ಅಲ್ ನಜಾತ್ ಕಾರ್ಯದರ್ಶಿ ಸಮೀರ್ ಸಿರಾಜ್ ವಂದಿಸಿದರು.