





ಪುತ್ತೂರು: ಪಡ್ನೂರು ಅಂಗನವಾಡಿ ಕೇಂದ್ರದಲ್ಲಿ ನೂತನ ಧ್ವಜಸ್ಥಂಭ ಹಾಗೂ ಅಂಗನವಾಡಿ ಹೊರಾಂಗಣ ಉದ್ಘಾಟನೆಯು 77ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಡೆಯಿತು.



ಮಹೇಶ್ ಮೂಲ್ಯ ಬೇರಿ ಕೆ ಧ್ವಜಾರೋಹಣ ಮಾಡಿದರು, ಗೀತಾ ಕೊಡಂಗೆ ಶಾಲೆ ಹೊರಾಂಗಣ ಉದ್ಘಾಟನೆ ಮಾಡಿದರು. ಜನಾರ್ದನ ಯುವಕ ಮಂಡಲ, ಶ್ರೀರಾಮ್ ಫ್ರೆಂಡ್ಸ್, ಶ್ರೀ ಶಕ್ತಿ ಸಂಘ ಸಂಜೀವಿನಿ ಸಂಘ ಪಡ್ನೂರು, ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ಪರ್ವೊಡಿ, ರಮನಿ ಗಾಣಿಗ, ವಿಮಲ ಗಣೇಶ, ಗಿರಿಧರ ಪಂಜುಗುಡ್ಡೆ ಭಾಗವಹಿಸಿದರು. ನವೀನ್ ಪಡ್ನೂರು ಸ್ವಾಗತಿಸಿ, ಪೂವಪ್ಪ ಕಾರ್ಯಕ್ರಮ ನಿರೂಪಿಸಿದರು. ಬಾಲ ವಿಕಾಸ ಸಮಿತಿಯ ಮಹೇಶ್ ಮೂಲ್ಯರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪಡ್ನೂರು ನಿತೇಶ, ನಯನ ದಿನೇಶ್ ಮೂಲ್ಯ ಶ್ರಮದಾನ ಮೂಲಕ ಸುಣ್ಣಬಣ್ಣ ಹಚ್ಚಿದರು. ಊರವರಾದ ನೀಲಪ್ಪ ನಾಯಕ ವಿಶ್ವನಾಥ ಹರೀಶ ಮುಂಡಾಜೆ ಜಗದೀಶ ಆಟಿಕು ಸಂತೋಷ್ ಮುಂಡಾಜೆ ಶ್ರಮದಾನ ಮಾಡಿದರು.














