ಅಂತಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಕಡಬ: ಐತ್ತೂರು ಗ್ರಾಮದ ಅಂತಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋವವನ್ನು ಆಚರಿಸಲಾಯಿತು. ನಿವೃತ್ತ ರೈಲ್ವೇ ಅಧಿಕಾರಿ ಪೂವಪ್ಪ ಗೌಡ ಐತ್ತೂರು ಧ್ವಜಾರೋಹಣ ನೇರವೆರಿಸಿದರು. ಐತ್ತೂರು ಗ್ರಾ.ಪಂ. ಸದಸ್ಯ ಈರೇಶ್ ಗೌಡ, ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿಶ್ವನಾಥ ಗೌಡ ಮುಂಡಡ್ಕ ಪೂವಪ್ಪ ಗೌಡ ಅಂತಿಬೆಟ್ಟು ಮೋನಪ್ಪ ಗೌಡ, ಗೋಪಾಲ ಗೌಡ, ಸುರೇಶ್ ಅಂತಿಬೆಟ್ಟು, ಲೋಕೇಶ್ ಅಂತಿಬೆಟ್ಟು ಪೂವಪ್ಪ ಗೌಡ ಜಯಪ್ರಕಾಶ್ ಕೊಡೆಂಕಿರಿ ,ದಿವಾಕರ ಗೌಡ ವಿನಯ ಐತ್ತೂರು, ಶೇಷಪ್ಪ ಗೌಡ ಐತ್ತೂರು, ಆಶಾಲತಾ, ಸಂಧ್ಯಾ ಅಂತಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಪ್ರಿಯ ಜಯಪ್ರಕಾಶ್ ,ಸದಸ್ಯರು ಅಂಗನವಾಡಿ ಸಹಾಯಕ ಯಮುನಾ, ಉಪಸ್ಥಿತರಿದ್ದರು.ದುಗ್ಗಪ್ಪ ಗೌಡ ಅಂತಿಬೆಟ್ಟು ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ದೇವಕಿ ವಂದಿಸಿದರು.

LEAVE A REPLY

Please enter your comment!
Please enter your name here