ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ; ಕೆಮ್ಮಾರ ಸರಕಾರಿ ಶಾಲೆಯ ಬಾಲಕಿಯರ ತಂಡ ದ್ವಿತೀಯ

0

ಉಪ್ಪಿನಂಗಡಿ: 2023-24ನೇ ಶೈಕ್ಷಣಿಕ ವರ್ಷದ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟವು ಸೈಂಟ್ ಮೇರೀಸ್ ವಿದ್ಯಾಸಂಸ್ಥೆ ಉಪ್ಪಿನಂಗಡಿ ಶಾಲೆಯಲ್ಲಿ ನಡೆಯಿತು.


ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಟಗಾರ್ತಿಯರಾದ ಜಮೀಲತ್ ನೌಶೀನ, ಜೋಯ, ಝೈನಬ ವಫಿಯ್ಯ ತಂಡವನ್ನು ಪ್ರತಿನಿಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರು.


ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ, ಮೆಹನಾಝ್, ಜುನೈದ್ ಕೆಮ್ಮಾರ, ಸಿಆರ್‌ಪಿಎಂ ಯೋಧ ಝುಬೈರ್ ಹಳೆನೇರೆಂಕಿ, ಅಜೀಜ್.ಜಿ ತರಬೇತು ನೀಡಿದ್ದರು.

LEAVE A REPLY

Please enter your comment!
Please enter your name here