ಆ.25: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ದಶಮಾನೋತ್ಸವ

0

ಪುತ್ತೂರು: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ಎಲ್ಲಾ ಮಹಿಳೆಯರ ಸಹಭಾಗಿತ್ವದಲ್ಲಿ 2014ರಲ್ಲಿ ಪ್ರಾರಂಭಗೊಂಡ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಈ ಭಾರಿ ದಶಮಾನೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ದಶಸಂಭ್ರಕ್ಕೆ ಧಾರ್ಮಿಕ ಕಾರ್ಯಕ್ರಮ, ಅಭಿನಂದನೆ, ಸಾಧಕರಿಗೆ ಸನ್ಮಾನ, ಯಕ್ಷಗಾನ ನಾಟ್ಯವೈಭವ ಕಾರ್ಯಕ್ರಮಗಳು ಆ.25ರಂದು ಶ್ರೀ ದೇವಳದಲ್ಲಿ ನಡೆಯಲಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಜರುಗಲಿದೆ ಎಂದು ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ವಿ ನಾಗಪ್ಪಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಪುರೋಹಿತ ವೇ ಮೂ ನಾಗರಾಜ ಭಟ್ ಸುಳ್ಯ ಅವರ ನೇತೃತ್ವದಲ್ಲಿ ಸಾಮೂಹಿಕ ಶ್ರಿ ವರಮಹಾಲಕ್ಷ್ಮೀ ಪೂಜೆ ನಡೆಯಲಿದೆ. ಬೆಳಿಗ್ಗೆ ಸಂಕಲ್ಪ ವ್ರತಧಾರಣೆ, ಬಳಿಕ ನಡೆಯುವ ದಶಮಾನೋತ್ಸವ ಸಭಾ ಕಾರ್ಯಕ್ರಮದಲ್ಲಿ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳು ಆಶೀರ್ವಚನ ನೀಡಲಿದ್ದಾರೆ. ವಿವೇಕಾನಂದ ಕಲಾವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಸ್ವಾಯತ್ತ ಇದ ಸ್ನಾತಕೋತರ ವಿಭಾಗದ ಡೀನ್ ಡಾ| ವಿಜಯ ಸರಸ್ವತಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅರ್ಚಕ ವಿಭಾಗದಲ್ಲಿ ರವೀಂದ್ರ ಮಾಣಿಲತ್ತಾಯ, ಪರಿಚಾರಕರಾದ ಸುಬ್ರಹ್ಮಣ್ಯ ರಾವ್, ನಾದಸೇವಕರಾದ ಶ್ರೀನಿವಾಸ್ ಪಿ, ಗುಮಾಸ್ತರಾದ ಉಮೇಶ್ ರಾವ್, ನಿವೃತ್ತ ಯೋಧ ಪ್ರವೀಣ ಬಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅವನಿ ಎ ಅವರನ್ನು ಅಭಿನಂದಿಸಲಾಗುವುದು ಎಂದು ಅವರು ಹೇಳಿದರು.


ದಶಮಾನೋತ್ಸವ ಸಮಿತಿ ಅಧ್ಯಕ್ಷೆ ಅಮಿತಾ ಸೀತಾರಾಮ ಅವರು ಮಾತನಾಡಿ ದಶಮಾನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಅಮೃತಾ ಅಡಿಗ ಪಾಣಾಜೆ ಅವರ ಭಾಗವತಿಕೆಯಲ್ಲಿ ಯಕ್ಷಗಾನ ನಾಟ್ಯವೈಭವ ನಡೆಯಲಿದೆ. ಸಂಜದ ದಶಸಂಭ್ರದ ಸಾಧಕ ಸನ್ಮಾನ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅಶೀರ್ವಚನ ನೀಡಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕಿ ಮತ್ತು ಮಾಜಿ ಮುಖ್ಯಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ವಿಶ್ವ ಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ ಆಂಡ್ ಕಲ್ಚರ್‌ನ ವಿದುಷಿ ನಯನ ವಿ ರೈ ಕುದ್ಕಾಡಿ, ಸುಳ್ಯ ವಾಸವಿ ಕಲಾವೇದಿಕೆಯ ಡಾ| ವೀಣಾ ಎನ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಲಕ್ಷ್ಮೀ ಕಟಾಕ್ಷ ಅದೃಷ್ಟ ಚೀಟಿ ವಿಶೇಷ
ಶ್ರೀ ವರಮಹಾಲಕ್ಷ್ಮೀ ಪೂಜೆಗೆಂದು ಪ್ರತ್ಯೇಕ ಅದೃಷ್ಟ ಚೀಟಿ ಮಾಡದೆ ಪೂಜಾ ಸೇವೆ ಮಾಡಿಸಿದವರ ರಶೀದಿಯನ್ನೇ ಅದೃಷ್ಟ ಚೀಟಿಯನ್ನಾಗಿ ಮಾಡಿ. ಅದರಲ್ಲಿ ಆಯ್ಕೆಗೊಂಡವರಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನವಾಗಿ ಪಟ್ಟೆಸೀರೆ ಬಾಗಿಣ ನೀಡಲಾಗುವುದು. ಇದರ ಜೊತೆಗೆ ಸಮಿತಿಯಿಂದ ಉಳಿಕೆಗೊಂಡ ಹಣವನ್ನು ಸಾಮಾಜಿಕ ಚಿಂತನೆಗೆ ಬಳಸಲಾಗುತ್ತದೆ. ಶೈಕ್ಷಣಿಕವಾಗಿ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ಪ್ರತಿ ವರ್ಷ ನೀಡುವ ಮೂಲಕ ಉತ್ತಮ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂದು ಸಮಿತಿ ಗೌರವಾಧ್ಯಕ್ಷ ಸರೋಜಿನಿ ವಿ ನಾಗಪ್ಪಯ್ಯ ಅವರು ಹೇಳಿದರು.

LEAVE A REPLY

Please enter your comment!
Please enter your name here