ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಸಮಿತಿಯಿಂದ ದೇವಳದ ವಠಾರದಲ್ಲಿ ನಡೆಯುವ ಗಣೇಶೋತ್ಸವದ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಿರಂತರ ನಡೆಯುತ್ತಿದ್ದು, ಆ.24ರಂದು ಗಣೇಶೋತ್ಸವ ವೇದಿಕೆಯಲ್ಲಿ ಭಗವದ್ಗೀತೆ ಕಂಠ ಪಾಠ ಸ್ಪರ್ಧೆ ನಡೆಯಲಿದೆ.
ಬೆಳಿಗ್ಗೆ ಗಂಟೆ 9.30ರಂದು ಸ್ಪರ್ಧೆ ಆರಂಂಭಗೊಳ್ಳಲಿದೆ. ಭಗವದ್ಗೀತೆಯ 11ನೇ ಅಧ್ಯಾಯದ 10 ಶ್ಲೋಕಗಳನ್ನು ಸ್ಪರ್ಧೆಗೆ ನೀಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು ಅವರು ತಿಳಿಸಿದ್ದಾರೆ.