ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಗಣನೀಯ ಸಾಧನೆಯನ್ನು ಗುರುತಿಸಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ವಿಶೇಷ ಪ್ರೋತ್ಸಾಹ ಪ್ರಶಸ್ತಿ ನೀಡಿ ಗೌರವಿಸಿದರು. ಆ.19 ರಂದು ಡಿಸಿಸಿ ಬ್ಯಾಂಕ್ನ ಉತ್ಕೃಷ್ಟ ಸಭಾಭವನದಲ್ಲಿ ನಡೆದ ಬ್ಯಾಂಕ್ನ ಮಹಾಸಭೆಯಲ್ಲಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ರವರು ಪ್ರಶಸ್ತಿ ನೀಡಿ ಗೌರವಿಸಿದರು.
ಸಂಘದ ಅಧ್ಯಕ್ಷೆ ಲಕ್ಷ್ಮೀ ಕೆ.ಜಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಂಸಾವತಿ ಕೆ ಪ್ರಶಸ್ತಿ ಸ್ವೀಕರಿಸಿದರು. ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘವು 2013-14ರಿಂದ 2016-17 ರ ತನಕ ಶೇ.100 ವಸೂಲಾತಿ ಹಾಗೂ 2017-18 ರಲ್ಲಿ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ, 2018-19ರಲ್ಲಿ ಶೇ.100 ವಸೂಲಾತಿ, 2019-20 ರಿಂದ 2022-23 ರ ತನಕ ಸತತ ವಿಶೇಷ ಪ್ರೋತ್ಸಾಹ ಪ್ರಶಸ್ತಿಯನ್ನು ಪಡೆದುಕೊಂಡು ಬಂದಿದೆ.
ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಮ ರೈ, ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ಕೌಶಲ್ ಶೆಟ್ಟಿ, ಕೊಳ್ತಿಗೆ ಸಿಎ ಬ್ಯಾಂಕ್ನ ನಿರ್ದೇಶಕ ಗಂಗಾಧರ ಗೌಡ ಕೆಮ್ಮಾರ, ಸತೀಶ್ ಪಾಂಬಾರು, ಗುರುವಪ್ಪ ಎಂ, ನಾಗವೇಣಿ ಕೆಕೆ, ವಿಶಾಲಾಕ್ಷಿ ಎ ಮತ್ತಿತರರು ಉಪಸ್ಥಿತರಿದ್ದರು.