ಉಪ್ಪಿನಂಗಡಿ: ನೇತ್ರಾವತಿ ಅಟೋ ಚಾಲಕ- ಮಾಲಕರ ಸಂಘದ ಅಧ್ಯಕ್ಷರಾಗಿ ಫಾರೂಕ್ ಝಿಂದಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಸೀಫ್ ಕೊಯಿಲ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಶಬೀರ್ ಕೆಂಪಿ, ಉಪಾಧ್ಯಕ್ಷರಾಗಿ ಶೀತಲ್ ಕುಮಾರ್, ಹನೀಫ್ ಆತ್ಮೀಯ, ಜೊತೆ ಕಾರ್ಯದರ್ಶಿಗಳಾಗಿ ಅಶೋಕ್ ಬಂಡಾಡಿ, ಹರೀಶ್ಚಂದ್ರ ನಂದಿನಿನಗರ, ಸಂಘಟನಾ ಕಾರ್ಯದರ್ಶಿಯಾಗಿ ಕಲಂದರ್ ಶಾಫಿ, ಕೋಶಾಧಿಕಾರಿಯಾಗಿ ಸೇಸಪ್ಪ ನೆಕ್ಕಿಲು, ಕಾನೂನು ಸಲಹೆಗಾರರಾಗಿ ಸಂತೋಷ್ ಕುಮಾರ್, ಸಲಹಾ ಸಮಿತಿಯ ಸದಸ್ಯರಾಗಿ ಅಬ್ದುಲ್ ಮಜೀದ್, ವಿಜಯ ಕುಮಾರ್ ಕಜೆಕ್ಕಾರು, ಚಿದಾನಂದ ಮೈತಳಿಕೆ, ಅಶ್ರಫ್ ಭಾರತ್, ಅಬ್ಬಾಸ್ ಕುದ್ಲೂರು, ಚಂದ್ರಶೇಖರ ಪುಳಿತ್ತಡಿ, ಯು.ಎಂ. ಬಶೀರ್ ಗಾಂಧಿಪಾರ್ಕ್, ಅಬ್ದುರ್ರಹ್ಮಾನ್, ನರಸಿಂಹ ಕಜೆಕ್ಕಾರು, ಹಂಝ ಕೊಪ್ಪಳ, ರಾಘವೇಂದ್ರ ನಟ್ಟಿಬೈಲು, ಪದ್ಮನಾಭ ಬಿಳಿಯೂರು, ಯಾಕೂಬ್ ಕೆಮ್ಮಾರ, ಅಮೀರ್ ಕೊಪ್ಪಳ, ಅಬೂಬಕ್ಕರ್ ವಿಟ್ಲ, ನಾರಾಯಣ ಕಾಳಿಕಾಂಬ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಉಪ್ಪಿನಂಗಡಿ ಗ್ರಾ.ಪಂ.ನ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸ್ಟೆಪ್ ಗ್ಯಾಸ್ ಮಾಲಕ ಅಪ್ಪಣ್ಣ, ಉಪ್ಪಿನಂಗಡಿ ಯೂನಿಯನ್ ಬ್ಯಾಂಕ್ನ ಪ್ರಬಂಧಕ ನಾಗರಾಜ್ ಕೆ. ಅವರನ್ನು ಆರಿಸಲಾಯಿತು.
ಸಂಘದ ನಿಕಟಪೂರ್ವಾಧ್ಯಕ್ಷ ಕೆ.ಎಚ್. ಅಬ್ದುಲ್ ಲತೀಫ್ ಕರಾಯ ಇವರ ಅಧ್ಯಕ್ಷತೆಯಲ್ಲಿ ಲಕ್ಷ್ಮೀನಗರದ ರೋಟರಿ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಈ ಸಂದರ್ಭ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಎಚ್. ಯೂಸುಫ್ ಹಾಜಿ ಉಪಸ್ಥಿತರಿದ್ದರು.