ಪುತ್ತೂರಿನಲ್ಲಿ ಬಾಲ ಪ್ರತಿಭೋತ್ಸವ- 2023

0

ಪುತ್ತೂರು: ಶ್ರೀ ರಾಮಕೃಷ್ಣ ಸೇವಾ ಸಮಾಜ ಪುತ್ತೂರು ಆಶ್ರಯದಲ್ಲಿ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಇವರು ಸಂಯೋಜಿಸುತ್ತಿರುವ ಬಾಲ ಪ್ರತಿಭೋತ್ಸವ-2023 ಶ್ರೀ ರಾಮಕೃಷ್ಣ ಸೇವಾ ಸಮಾಜದಲ್ಲಿ ಇತ್ತೀಚೆಗೆ ಜರಗಿತು.

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಜತೆ ಕಾರ್ಯದರ್ಶಿಗಳಾದ ರೂಪಲೇಖಾರವರು ಉದ್ಘಾಟಿಸಿ ಮಾತನಾಡಿ, ಭರತನಾಟ್ಯದಂತಹ ಕಲೆಗಳನ್ನು ಕಲಿಯುವುದರಿಂದ ನಮ್ಮ ಸಂಸ್ಕೃತಿ, ಪುರಾಣದ ಕಥೆಗಳನ್ನು ಇಂದಿನ ಮಕ್ಕಳು ಸುಲಭದಲ್ಲಿ ಕಲಿತುಕೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಪರಿಷತ್ ನಡೆಸುತ್ತಿರುವ ಇಂತಹ ಪ್ರತಿಭೋತ್ಸವಗಳು ಮಕ್ಕಳ ಬೆಳವಣಿಗೆಗೆ ತುಂಬಾ ಸಹಕಾರಿಯಾಗಲಿದೆ ಎಂದು ಹೇಳಿ ಶುಭ ಹಾರೈಸಿದರು.
ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಪೂರ್ವಾಧ್ಯಕ್ಷರಾದ ಕಮಲಾಕ್ಷ ಆಚಾರ್, ಅಧ್ಯಕ್ಷ ಯು.ಕೆ.ಪ್ರವೀಣ್, ಕಾರ್ಯದರ್ಶಿ ವಿದ್ವಾನ್ ಸುಧೀರ್ ರಾವ್ ಕೊಡವೂರು, ಕೋಶಾಧ್ಯಕ್ಷ ಸುರೇಶ್ ಅತ್ತಾವರ್, ಸಮಿತಿಯ ಪದಾಧಿಕಾರಿಗಳಾದ ರಾಜಶ್ರೀ ಉಲ್ಲಾಳ್, ನಯನ ರೈ ಉಪಸ್ಥಿತರಿದ್ದರು. ಪುತ್ತೂರಿನ ನೃತ್ಯಗುರುಗಳ 13 ಬಾಲ ನೃತ್ಯ ಕಲಾವಿದೆಯರು ನೃತ್ಯಪ್ರದರ್ಶನ ನೀಡಿದರು.
ಪ್ರೀತಿಕಲಾ ದೀಪಕ್ ರವರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಮಂಜುಳಾ ಸುಬ್ರಹ್ಮಣ್ಯಂ ಮತ್ತು ಸುದರ್ಶನ್ ಎಂ.ಎಲ್ ರವರು ನಿರೂಪಿಸಿದರು

LEAVE A REPLY

Please enter your comment!
Please enter your name here