ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘ (ರಿ)ವಿಟ್ಲ – ವಾರ್ಷಿಕ ಮಹಾಸಭೆ- ಸನ್ಮಾನ-ಪ್ರತಿಭಾ ಪುರಸ್ಕಾರ

0

ವಿಟ್ಲ: ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘ (ರಿ) ವಿಟ್ಲ ಇದರ ವಾರ್ಷಿಕ ಮಹಾಸಭೆ-2023 ಕಾರ್ಯಕ್ರಮವು 27ನೇ ಆದಿತ್ಯವಾರ ಚೋರ್ಲ ವಾಣಿಯರ ತರವಾಡು ಕರೋಪಾಡಿ ಇಲ್ಲಿ ಜರುಗಿತು. ಪೂ.ಗಂಟೆ 9ರಿಂದ ವಾಣಿಯ ಗಾಣಿಗ ಮಹಿಳಾ ಭಜನಾ ಮಂಡಳಿ ಸದಸ್ಯರುಗಳಿಂದ ಭಜನಾ ಸಂಕೀರ್ತನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಸಮುದಾಯದ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಂತರ ನಡೆದ ಮಹಾಸಭೆಯಲ್ಲಿ ಇತ್ತೀಚೆಗೆ ಭಾರತೀಯ ಸೇನೆಯಲ್ಲಿ ನಿವೃತ್ತಿಯಾದ ಲೋಕೇಶ್ ಎ ಎಸ್ ಇರಂತಮಜಲು ಇವರನ್ನು ಸನ್ಮಾನಿಸಲಾಯಿತು. ಸಮುದಾಯದ SSLC, PUC ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿದ್ಯಾರ್ಥಿವೇತನ, ಪುರಸ್ಕಾರ ಪತ್ರ ನೀಡಿ ಗೌರವಿಸಲಾಯಿತು.

ವಿದ್ಯಾ ನಿಧಿ ನಗದು ಪುರಸ್ಕಾರದ ಪ್ರಾಯೋಜಕರಾದ ಸ್ವಿಗ್ಗಿ ಬೆಂಗಳೂರು ನಿರ್ದೇಶಕರಾದ ಪ್ರೀತಂ ಕೆ ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಇಂದಿನ ಯುವಕರು ತಮ್ಮಲ್ಲಿ ಅಡಗಿರುವ ಉತ್ತಮ ಆಲೋಚನೆಗಳನ್ನು ರಾಷ್ಟ್ರ ಮಟ್ಟದಲ್ಲಿ ಔದ್ಯೋಗಿಕ ರಂಗದಲ್ಲಿ ತೊಡಗಿಸಿಕೊಂಡಲ್ಲಿ ಆರ್ಥಿಕ ಅಭಿವೃದ್ಧಿಗೆ ಸಹಕಾರ ಆಗಬಹುದಾಗಿದೆ ಎಂದು ಯುವಕರಿಗೆ ಪ್ರೋತ್ಸಾಹದ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷರಾದ ಕರೋಪಾಡಿ ರಾಮಕೃಷ್ಣ ಬೆಳ್ಚಪಾಡ ಅಚ್ಚನ್, ಕರೋಪಾಡಿ ತರವಾಡು ಸಮಿತಿಯ ಉಪಾಧ್ಯಕ್ಷರಾದ ತೇರಪ್ಪ ಆರಿಕ್ಕಾಡಿ ಉಪಸ್ಥಿತರಿದ್ದರು.

ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಉದಯ ಕುಮಾರ್ ದಂಬೆ ವಹಿಸಿದ್ದರು. ಸಾಂಸ್ಕೃತಿಕ ಹಾಗೂ ಕ್ರೀಡಾ ಕೂಟದ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಬಹುಮಾನ ವಿಜೇತರ ಪಟ್ಟಿಯನ್ನು ಸಂಘಟನಾ ಕಾರ್ಯದರ್ಶಿ ನವೀನ್ ಪಾದೆಕಲ್ಲು ವಾಚಿಸಿದರು. ಸನ್ಮಾನ ಪತ್ರವನ್ನು ಲೀಲಾಜಯರಾಮ್ ಪಾದೆಕಲ್ಲು ವಾಚಿಸಿದರು. ಸಾಂಸ್ಕೃತಿಕ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಶ್ರೀಮತಿ ದಿವ್ಯ ಪ್ರೀತಂ, ಶ್ರೀಮತಿ ಪ್ರವೀಣ ಕೆ.ಎಸ್ ಹಾಗೂ ಶ್ರೀಮತಿ ರಚನಾ ಬುಳೇರಿಕಟ್ಟೆ ಇವರನ್ನು ಗೌರವಿಸಲಾಯಿತು.

ಶಿಕ್ಷಕ ನಾಗೇಶ್ ಪೆರುವಾಯಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಲ್ಲಿ ಸಂಘದ ಯಶೋಗಾಥೆಯನ್ನು ಸಭೆಯ ಮುಂದಿಟ್ಟರು. ಸಂಘದ ಕೋಶಾಧಿಕಾರಿ ಶಂಕರ್ ಕೋಡಿಜಾಲು ಲೆಕ್ಕಪತ್ರ ಮಂಡಿಸಿದರು. ಕು.ಹವ್ಯಶ್ರೀ,ಕು.ಹೃತೀಯ ಪ್ರಾರ್ಥಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ದ ಸಂಯೋಜಕರು ಶಿಕ್ಷಕಿ ವಿದ್ಯಾನವೀನ್ ಪಾದೆಕಲ್ಲು ವಂದಿಸಿದರು. ಜಗದೀಶ್ ಎರುಂಬು ತರವಾಡು ಇವರು ಕಾರ್ಯಕ್ರಮ ನಿರೂಪಿಸಿದರು. ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ (ರಿ) ಸುಳ್ಯ ಇದರ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ಸಭೆಯಲ್ಲಿ ಗಾಣಿಗ ಸಮ್ಮಿಲನ 2023 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿತರಿಸಿ ಆಹ್ವಾನಿಸಿದರು.

ಕ್ಷೇತ್ರದ ಪಟ್ಟಿಕಾರರಾದ ಸಂಘದ ಗೌರವ ಸಲಹೆಗಾರರು ಬಾಲಕೃಷ್ಣ ವಾಟೆ, ಬಾಬು ವಾಟೆ, ಹಾಗೂ ಉಪಾಧ್ಯಕ್ಷರುಗಳಾದ ಮಹಾಲಿಂಗ ಚೆಲ್ಲಡ್ಕ, ನವೀನ್ ಕಿಶೋರ್ ಕುದ್ದುಪದವು, ಸುಬ್ಬ ಮಲ್ತಡ್ಕ, ಸುಬ್ಬ ಮೂಡಂಬೈಲು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು,ವಲಯ ಸಂಯೋಜಕರು,ಸರ್ವಸದಸ್ಯರುಗಳು ಹಾಗೂ ಸಮುದಾಯ ಬಾಂಧವರು ಉಪಸ್ಥಿತರಿದ್ದರು. ಕೊನೆಗೆ ನಡೆದ ವಿಶೇಷ ಆಕರ್ಷಣಾ ಏಲಂ ಕಾರ್ಯಕ್ರಮದಲ್ಲಿ ಮುಡಿಅಕ್ಕಿ ಸತೀಶ್ ಕುದ್ದು ಪದವು ಇವರ ಪಾಲಾಯಿತು. ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು ಸಲ್ಲಿಸಿ ಕಾರ್ಯಕ್ರಮ ಸಮಾಪನಗೊಂಡಿತು.

LEAVE A REPLY

Please enter your comment!
Please enter your name here