ಬಿಲ್ಲವ ಮೀಸಲಾತಿ ಕೈ ಜಾರದಂತೆ ನಿಗಾ ವಹಿಸಬೇಕು -ಸತ್ಯಜಿತ್ ಸುರತ್ಕಲ್
ಪುತ್ತೂರು : ಜೀವನವು ಪಂಚಭೂತಗಳಿಂದಲೇ ಸೃಷ್ಟಿಯಾಗಿದ್ದು , ಅದರೊಳಗೆಯೇ ಲೀನವು ಕೂಡ.ಕೆಸರಿನಲ್ಲಿ ಆಡೋ ಮಕ್ಕಳಿಗೆ ಬೆದರಿಸಬೇಡಿ. ಇದರಿಂದ ದೇಹ ಗಟ್ಟಿಯಾಗುವುದಲ್ಲದೇ , ಜೀವನವೂ ಕೂಡ ಗಟ್ಟಿಯಾಗುತ್ತದೆ.ನಾವೆಲ್ಲರೂ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯ ತತ್ವ ,ಆದರ್ಶವನ್ನೂ ಆಳವಡಿಸಿಕೊಂಡು ಒಗ್ಗಟ್ಟಿನಿಂದ ಇರಬೇಕು , ಅದೇ ರೀತಿಯಲ್ಲಿ ಬಿಲ್ಲವ ಸಮುದಾಯಕ್ಕೆ ಇರುವಂತಹ ಮೀಸಲಾತಿಗಳೆಂದೂ ಕೈ ತಪ್ಪದಂತೆ ಜಾರದಂತೆ ನಾವೆಲ್ಲ ನಿಗಾ ವಹಿಸಬೇಕೆಂದು ಶ್ರೀ ನಾರಾಯಣ ಗುರು ವಿಚಾರಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅನಿಸಿಕೆ ವ್ಯಕ್ತಪಡಿಸಿದರು.
ಅವರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ರಿ , ಪುತ್ತೂರು ಮತ್ತು ಕಬಕ ಗ್ರಾಮ ಸಮಿತಿ ಇವುಗಳ ಆಶ್ರಯದಲ್ಲಿ ತಾಲೂಕು ಮಟ್ಟಕ್ಕೆ ಸೀಮಿತವಾದ ಒಂದು ದಿನದ “ಬಿರುವೆರ್ನಾ ಕೆಸರ್ದ ಗೊಬ್ಬು ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧಕರನ್ನು ಸನ್ಮಾನಿಸಿ , ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಹಾರೈಸಿದರು. ಮಾಜಿ ಶಾಸಕ ಸಂಜೀವ ಮಠಂದೂರು , ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ , ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆಡೆಂಜಿ ,ಅಕ್ಷಯ ಕಾಲೇಜು ಇದರ ಅಧ್ಯಕ್ಷ ಜಯಂತ ನಡುಬೈಲು ,ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ವಿಮಲ ಸುರೇಶ್ , ಬಿಲ್ಲವ ಮಹಿಳಾ ವೇದಿಕೆ ಕಬಕ ಗ್ರಾಮ ಸಮಿತಿ ಅಧ್ಯಕ್ಷೆ ಯಶೋಧ ಬಿರಾವು , ಕಬಕ ಗೀತಾ ಬಾರ್ ಮಾಲಕ ರಾಮಣ್ಣ ಪೂಜಾರಿ ,ಪುತ್ತೂರು ಬಿಲ್ಲವ ಸಂಘ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ , ಶ್ರೀ ಗೆಜ್ಜೆಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ , ವಿಷ್ಣು ಮೆಟಲ್ಸ್ ಮಾಲಕ ಕೇಶವ ಪೂಜಾರಿ ಮುರ , ವಲಯ ಸಂಚಾಲಕ ಅಣ್ಣಿ ಪೂಜಾರಿ ಹಾಗೂ ಉದ್ಯಮಿ ಸೇಸಪ್ಪ ಪೂಜಾರಿ ಪಟ್ಲ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ , ಹರಸಿದರು. ವಸಂತ ಪೂಜಾರಿ ಶೇವಿರೆ ಅಧ್ಯಕ್ಷತೆ ವಹಿಸಿದ್ದರು.
ಬಿಲ್ಲವ ಕಬಕ ಗ್ರಾಮ ಸಮಿತಿ ಇದರ ಉಪಾಧ್ಯಕ್ಷ ಧನಂಜಯ ಪಟ್ಲ ಸ್ಪರ್ಧೆಗಳ ಮೇಲುಸ್ತುವಾರಿ ನಿರ್ವಹಿಸಿದರು.
ಗ್ರಾಮ ಸಮಿತಿಯ ಕೋಶಾಧಿಕಾರಿ ಮನೋಹರ್ ಕಾರ್ಜಾಲ್ , ಕಾರ್ಯದರ್ಶಿ ನಿತಿನ್ ಕಬಕ ,ಜೊ.ಕಾ. ಮನೋಜ್ ಪೆರಿಯತೋಡಿ , ಮಹಿಳಾ ವೇದಿಕೆಯ ಸಮಿತಿಯ ಉಪಾಧ್ಯಕ್ಷೆ ಬೇಬಿ ಶೇವಿರೆ ,ಕಾರ್ಯದರ್ಶಿ ಪ್ರಿಯಾಂಕ ಹರೀಶ್ ,ಜೊ.ಕಾ.ಅಶ್ವಿನಿ ಹಾಗೂ ಕೋಶಾಧಿಕಾರಿ ಮಮತಾ ಸಹಿತ ಉಭಯ ಸಮಿತಿಗಳ ಸದಸ್ಯರೆಲ್ಲರ ಸಹಿತ ಕ್ರೀಡಾಭಿಮಾನಿಗಳು ಇದ್ದರು.
ಗೌರವರ್ಪಾಣೆ….
ಬಿಲ್ಲವ ಗ್ರಾಮ ಸಮಿತಿಯ ಸ್ಥಾಪಕಾಧ್ಯಕ್ಷ ಜಿನ್ನಪ್ಪ ಪೂಜಾರಿ ಮುರ , ಕಲಾವಿದ ಕೃಷ್ಣಪ್ಪ , ಲಲಿತ ತಿಮ್ಮಪ್ಪ ಪೂಜಾರಿ ಹಾಗೂ ಕಮಲ ಶಾಂತಪ್ಪ ಪೂಜಾರಿ ಇವರುಗಳ ಸಾಧನೆಗಾಗಿ ವೇದಿಕೆಯಲ್ಲಿದ್ದ ಅತಿಥಿಗಳ ಮುಖೇನ ಸನ್ಮಾನಿಸಿ ,ಗೌರವಿಸಲಾಯಿತು.