ದಕ್ಷಿಣ ಭಾರತ ಮಟ್ಟದ ಕರಾಟೆ ಚಾಂಪಿಯನ್ ಶಿಪ್ – ಪುತ್ತೂರಿನ ಶಿಟೋರ್‍ಯೂ ತಂಡಕ್ಕೆ 5 ಚಿನ್ನ, 2 ಬೆಳ್ಳಿ, 10 ಕಂಚಿನ ಪದಕ

0

ಪುತ್ತೂರು:ಚೆನ್ನೈನ ಡೆಕತ್ಲಾನ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಪುತ್ತೂರಿನ ಇಂಪ್ಯಾಕ್ಟ್ ಆರ್ಟ್ಸ್ ಸ್ಪೋರ್ಟ್ಸ್ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ 5 ಚಿನ್ನ, 2 ಬೆಳ್ಳಿ ಹಾಗೂ 10 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
ಪುತ್ತೂರು ತಂಡದ ಆಶ್ಮೀ ರೈ, ನಯನ, ಸಹನ, ಇಶಿಕಾ, ಖುಷಿ, ಬವಿಷ್, ಅಹಿಲ್, ವರುಣ್, ತನುಷ್, ವಿಸ್ಮಯ್, ಪೂರ್ವಿ ರೈ ಹಾಗೂ ತೇಜಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಪಡೆದುಕೊಂಡಿದ್ದಾರೆ. ಇವರಿಗೆ ಇಂಪ್ಯಾಕ್ಟ್ ಆರ್ಟ್ಸ್‌ಸ್ಪೋರ್ಟ್ಸ್ ಕ್ಲಬ್‌ನ ಮುಖ್ಯ ಶಿಕ್ಷಕ ಶಿಹಾನ್ ಟಿ.ಡಿ ತೋಮಸ್‌ರವರ ಮಾರ್ಗದರ್ಶನದಲ್ಲಿ ಕರಾಟೆ ಶಿಕ್ಷಕರಾದ ನಾರಾಯಣ ಆಚಾರ್ಯ ಕಾವು, ತಾರಾನಾಥ ಹೊಸೋಳಿಕೆ, ಚಂದ್ರಶೇಖರ್ ಹಾಗೂ ಜಗದೀಶ ಆಚಾರ್ಯ ತರಬೇತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here