ಉಪ್ಪಿನಂಗಡಿ: ಮಾತಿನ ಮೋಡಿಯ ಕಳ್ಳ ಖಾಕಿಯ ಬಲೆಗೆ-ಮೋದಿ ಹೆಸರು ಹೇಳಿ ಪಂಗನಾಮ ಹಾಕುತ್ತಿದ್ದ ನಯ ವಂಚಕನ ಬಂಧನ

0

ಉಪ್ಪಿನಂಗಡಿ :ಜನರಲ್ಲಿ ಮಾತಿನ ಮೋಡಿಯಿಂದ ಅಂಗೈಯಲ್ಲಿ ಆಕಾಶ ತೋರಿಸಿ ನಿಮಗೆ ಮೋದಿ ಹಣ ತೆಗೆದುಕೊಡುತ್ತೇನೆ ಎಂದು ನಂಬಿಸಿ ಉಪ್ಪಿನಂಗಡಿ ಸಹಿತ ಹಲವು ಕಡೆ ಜನರಿಗೆ ಪಂಗನಾಮ ಹಾಕಿ ಹಣ, ಚಿನ್ನದ ಸರಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಈತ ಮೂಲತಃ ಕಾಸರಗೋಡಿನವನಾಗಿದ್ದು, ಉಪ್ಪಿನಂಗಡಿಯಲ್ಲಿ ಈ ಹಿಂದೆ ರಸ್ತೆ ಬದಿ ಬನಿಯನ್, ಟೀ ಶರ್ಟ್ ಮಾರುತ್ತಿದ್ದ ಎನ್ನಲಾಗಿದೆ. ಈತ ಉಪ್ಪಿನಂಗಡಿಯಲ್ಲಿ ಹಲವು ಮಂದಿಯನ್ನು ನಿಮಗೆ ಮೋದಿಯ ಹಣ ತೆಗೆದುಕೊಡುತ್ತೇನೆಂದು ಮಾತಿನಲ್ಲಿ ಮೋಡಿ ಮಾಡಿ ಹಣ,ಚಿನ್ನದ ಸರಗಳನ್ನು ಅವರಿಂದಲೇ ಪಡೆದು ಬಳಿಕ ಪರಾರಿಯಾಗುತ್ತಿದ್ದ. ಈತನ ಮಾತಿಗೆ ಕಿವಿಕೊಟ್ಟು ಪ್ರತ್ಯುತ್ತರ ನೀಡಿದವರಿಗೆ ಸುಮಾರು 5ನಿಮಿಷ ಕಾಲ ನಾವು ಎಲ್ಲಿದ್ದೇವೆ? ಎಣು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರುತ್ತಿರಲಿಲ್ಲ.ಹಾಗಾಗಿ ಅನೇಕ ಜನ ಹಣ, ಸರ ಕಳೆದುಕೊಳ್ಳುತ್ತಿದ್ದರು.ಈ ಅರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಯಾಗಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.

LEAVE A REPLY

Please enter your comment!
Please enter your name here