ಪುತ್ತೂರು: ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ 29 ರಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಕ್ರೀಡೆಯು ವಹಿಸುವ ಮಹತ್ತರವಾದ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಆ.29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು.
ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಮಾತನಾಡಿ, ಓರ್ವ ವ್ಯಕ್ತಿ ಸಾಧಕನಾಗಬೇಕಾದರೆ ಆತನಲ್ಲಿ ಕಠಿಣ ಪರಿಶ್ರಮ, ಬದ್ಧತೆ, ಸಮರ್ಪಣಾಭಾವ ಪ್ರಮುಖವಾಗಿ ಬೇಕಾಗುತ್ತದೆ. ಹಾಕಿ ದಂತಕಥೆ ಧ್ಯಾನ್‌ಚಂದ್‌ರವರು ಕಠಿಣ ಪರಿಶ್ರಮ, ಬದ್ಧತೆ, ಸಮರ್ಪಣಾಭಾವವನ್ನು ಮೈಗೂಡಿಸಿಕೊಂಡು ಸಾಧನೆಯತ್ತ ಹೆಜ್ಜೆಯಿಟ್ಟಿದ್ದರಿಂದಲೇ ಇಂದು ನಾವು ಅವರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಹಾಗೆಯೇ ಇಂದಿಲ್ಲಿ ಸನ್ಮಾನಿತಗೊಂಡ ಕಾಮನ್‌ವೆಲ್ತ್ ಕ್ರೀಡಾಪಟುಗಳ ಸಾಧನೆಯನ್ನು ಕೂಡ ಮೆಚ್ಚಬೇಕಾದ್ದೇ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಈ ನಾಲ್ವರು ಉದಯೋನ್ಮುಖ ಕ್ರೀಡಾಪಟುಗಳ ಭವಿಷ್ಯ ಉಜ್ವಲವಾಗಲಿ ಎಂದರು.
ಹಿರಿಯ ಸನ್ಮಾನಿತ ಸಾಧಕರ ಸಾಧನೆ:
ಅಕ್ವಾಟಿಕ್ ಕ್ಲಬ್ ತರಬೇತುದಾರರಾಗಿರುವ ಪಾರ್ಥ ವಾರಣಾಶಿರವರು ಮಂಗಳೂರು ವಿ.ವಿಯ ಸ್ವಿಮ್ಮರ್ ಆಗಿದ್ದು ಈಜು ಸ್ಪರ್ಧೆಗಳಲ್ಲಿ ಸತತವಾಗಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿರುತ್ತಾರೆ. 2019ರಲ್ಲಿ ಸೌತ್ ಕೊರಿಯದ ಗ್ವಾಂಗ್ಜುವಿನಲ್ಲಿ ನಡೆದ ಫಿನಾ ವಿಶ್ವ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನ ಟೀಮ್ ಇಂಡಿಯಾ ಕೋಚ್, ವಾರಣಾಶಿ ಸ್ವಿಮ್ಮಿಂಗ್ ಅಕಾಡೆಮಿ ಹಾಗೂ ಸರ್ಫ್ ಲೈಫ್ ಸೇವಿಂಗ್ ಇಂಡಿಯಾದ ನಿರ್ದೇಶಕರೂ ಆಗಿರುತ್ತಾರೆ. ಅನೇಕ ಅಂರ‍್ರಾಷ್ಟ್ರೀಯ ಈಜುಪಟುಗಳಿಗೆ ತರಬೇತಿ ನೀಡಿ ಅವರುಗಳನ್ನು ವಿಶ್ವಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವಂತೆ ಮಾಡಿರುತ್ತಾರೆ. ವೈಟ್‌ಲಿಪ್ಟಿಂಗ್ ತರಬೇತುದಾರರಾಗಿರುವ ಪುಷ್ಪರಾಜ್‌ರವರು ಬಿಎಸ್‌ಎಫ್ ಭಾರತೀಯ ಆರ್ಮಿಯಲ್ಲಿ 2008ರಿಂದ 2021ರ ವರೆಗೆ ಬಿಎಸ್‌ಎಫ್ ವೈಟ್‌ಲಿಪ್ಟಿಂಗ್ ತಂಡವನ್ನು ಮುನ್ನೆಡೆಸಿರುತ್ತಾರೆ. ಹಬೀಬ್ ಮಾಣಿರವರು ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ, ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ಆಟಗಾರರಾಗಿ, ಹಜಾಜ್ ಕಲ್ಲಡ್ಕ ಕಬಡ್ಡಿ ತಂಡದ ಸಕ್ರಿಯ ಆಟಗಾರರಾಗಿರುತ್ತಾರೆ.
ಕಾಲೇಜಿನ ಐಕ್ಯೂಎಸಿ ನಿರ್ದೇಶಕಿ ಡಾ.ಕೆ.ಮಾಲಿನಿ, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ|ನೋರ್ಬರ್ಟ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ದಿನದ ಮಹತ್ವದ ಕುರಿತು ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿ ಬಳಗ ಪ್ರಾರ್ಥಿಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎ.ಪಿ ರಾಧಾಕೃಷ್ಣ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಭಾರತಿ ಎಸ್.ರೈ ವಂದಿಸಿದರು. ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ, ಕಾಲೇಜಿನ ಕ್ರೀಡಾಪಟುಗಳು ಸಹಕರಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.
ಸಾಧಕರ ಹೆಗ್ಗುರುತು..
ಸ್ವೀಕೃತ್ ಆನಂದ್‌ರವರು ಇಂದೋರ್, ಡ್ಯೂ ಮತ್ತು ದಮಾಮ್, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆದ ರಾಷ್ಟ್ರೀಯ ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಗಳಿಸಿರುತ್ತಾರೆ. 2018ರಲ್ಲಿ ಆಸ್ಟ್ರೇಲಿಯಾದ ಆ್ಯಡಿಲೇಡ್‌ನಲ್ಲಿ ನಡೆದ ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್‌ನಲ್ಲಿ 12.5ಮೀ ಲೈನ್ ಥ್ರೋನಲ್ಲಿ ಫೈನಲಿಸ್ಟ್ ಆಗಿದ್ದರು ಅಲ್ಲದೆ ಕೆನಡದಲ್ಲಿ ನಡೆದ ಅಂರ‍್ರಾಷ್ಟ್ರೀಯ ಲೈಫ್ ಸೇವಿಂಗ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ. ತ್ರಿಶೂಲ್ ಗೌಡರವರು ವಿಶ್ವವಿದ್ಯಾನಿಲಯ ಮಟ್ಟದ ಈಜುಗಾರರಾಗಿದ್ದು ಈಜು ಸ್ಪರ್ಧೆಯಲ್ಲಿ ಅನೇಕ ಪದಕಗಳನ್ನು ಗಳಿಸಿಕೊಂಡಿದ್ದರು ಮಾತ್ರವಲ್ಲ ಆಸ್ಟ್ರೇಲಿಯಾದ ಆಡಿಲೇಡ್‌ನಲ್ಲಿನ ಈಜು ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡಿದ್ದರು. ನೀಲ್ ಮಸ್ಕರೇನ್ಹಸ್‌ರವರು ಡೆಲ್ಲಿ, ಮಹಾರಾಷ್ಟçದಲ್ಲಿ ನಡೆದ ಫಸ್ಟ್ ಖೇಲೊ ಇಂಡಿಯಾ ಚಾಂಪಿಯನ್‌ಶಿಪ್, ಮಂಗಳೂರು ವಿ.ವಿ ಏರ್ಪಡಿಸಿದ ಈಜು ಸ್ಪರ್ಧೆಯ 17 ವಿಭಾಗದಲ್ಲಿನ 16 ವಿಭಾಗದಲ್ಲಿ 15 ಚಿನ್ನ, 1 ಬೆಳ್ಳಿ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್‌ಶಿಪ್, ಪುಣೆಯಲ್ಲಿ ಎಸ್‌ಎಫ್‌ಐ ನ್ಯಾಶನಲ್ಸ್ನಲ್ಲಿ ಭಾಗವಹಿಸಿರುತ್ತಾರೆ. ಧನ್ವಿತ್‌ರವರು ಎಸ್‌ಜಿಎಫ್‌ಐ ರಾಜ್ಯ ಮಟ್ಟದ ಈಜು ಸ್ಪರ್ಧೆ, ಜಿಲ್ಲೆ ಹಾಗೂ ರಾಜ್ಯಮಟ್ಟದ ವಿದ್ಯಾಭಾರತಿ ಸ್ಪರ್ಧೆ, ರಾಷ್ಟ್ರೀಯ ಮುಕ್ತ ಈಜು ಸ್ಪರ್ಧೆ, ರಾಷ್ಟಿçÃಯ ಲೈಫ್ ಸೇವಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ, ಪುಣೆಯಲ್ಲಿ ಜರಗಿದ ಆಯ್ಕೆ ಟ್ರಯಲ್ಸ್ ಈಜುಗೆ ಆಯ್ಕೆಯಾಗಿದ್ದರು.
ಕಾಮನ್‌ವೆಲ್ತ್ ಸಾಧಕರಿಗೆ ಸನ್ಮಾನ..
ಈ ಸಂದರ್ಭದಲ್ಲಿ ಕೆನಡದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್-2023 ಇದರಲ್ಲಿ ಭಾಗವಹಿಸಲಿರುವ ಕಾಲೇಜಿನ ಪ್ರಸಕ್ತ ವಿದ್ಯಾರ್ಥಿ ತ್ರಿಶೂಲ್ ಗೌಡ, ಹಿರಿಯ ವಿದ್ಯಾರ್ಥಿಗಳಾದ ಸ್ವೀಕೃತ್ ಆನಂದ್, ನೀಲ್ ಮಸ್ಕರೇನ್ಹಸ್ ಹಾಗೂ ಧನ್ವಿತ್‌ರವರುಗಳನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಜೊತೆಗೆ ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಾಧನೆ ಮಾಡಿದ ಹಿರಿಯರಾದ ವೈಟ್‌ಲಿಪ್ಟಿಂಗ್ ತರಬೇತುದಾರ ಪುಷ್ಪರಾಜ್, ಕಬಡ್ಡಿ ತರಬೇತುದಾರ ಹಬೀಬ್ ಮಾಣಿ ಹಾಗೂ ಆಕ್ವಾಟಿಕ್ ಕ್ಲಬ್ ತರಬೇತುದಾರ ಪಾರ್ಥ ವಾರಣಾಶಿರವರನ್ನು ಗುರುತಿಸಿ ಸನ್ಮಾನಿಸಲಾಯಿತು.