ಇರ್ದೆ: ದರ್ಬೆ ದೂಮಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2022-2023ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಆ.30 ರಂದು ಸಂಘದ ಆವರಣದಲ್ಲಿ ಅಧ್ಯಕ್ಷೆ ಪಾರ್ವತಿ ಬಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ದೇವಕಿ ಶ್ರೀಭಟ್ ಪ್ರಾರ್ಥಿಸಿದರು. ಉಪಾಧ್ಯಕ್ಷೆ ಸುನೀತ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಆಶಾ ಅರವಿಂದ ಗತ ವರ್ಷದ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಕೆ.ಎಂ.ಎಫ್.ನ ವಿಸ್ತರಣಾಧಿಕಾರಿ ಮಾಲತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆ ನೀಡಿದರು. 2022-2023ನೇ ಸಾಲಿನಲ್ಲಿ ಸಂಘವು ರೂ. 1,81,933.03 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 10 ಡಿವಿಡೆಂಡ್ ಹಾಗೂ ಪ್ರತೀ ಲೀಟರಿಗೆ 84 ಪೈಸೆಗಳ ಬೋನಸ್ ಘೋಷಿಸಲಾಯಿತು. ಸಂಘಕ್ಕೆ ಹಾಲು ಪೂರೈಸಿದ ಸದಸ್ಯರಿಗೆ ಪ್ರೊತ್ಸಾಹಕ ಬಹುಮಾನ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ರೇಖಮಾಲಾ ಜೆ. ವಂದಿಸಿದರು. ಆಶಾ ಅರವಿಂದ ಕಾರ್ಯಕ್ರಮ ನಿರೂಪಿಸಿದರು.
©