ಪುತ್ತೂರು: ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಸಿಂಹಮಾಸದ 2ನೇ ಶನಿವಾರ ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗ ತಂಡದಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ `ವೀರಮಣಿ ಕಾಳಗ’ ಎನ್ನುವ ತಾಳಮದ್ದಳೆ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕು.ಸಿಂಚನಾ ಮೂಡುಕೋಡಿ, ಚೆಂಡೆ – ಮದ್ದಲೆಯಲ್ಲಿ ರಾಮದಾಸ್ ಶೆಟ್ಟಿ ವಗೆನಾಡು ಮತ್ತು ಮಾ.ಅದ್ವೈತ್ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ ಹನುಮಂತನಾಗಿ ಪದ್ಮಾ ಕೆ ಆರ್ ಆಚಾರ್ಯ, ಈಶ್ವರನಾಗಿ ಪ್ರೇಮಾ ಕಿಶೋರ್, ವೀರಮಣಿಯಾಗಿ ಶ್ರೀವಿದ್ಯಾ ಜೆ ರಾವ್, ಶ್ರೀರಾಮನಾಗಿ ಹೀರಾ ಉದಯ್, ಶತ್ರುಘ್ನನಾಗಿ ಶೃತಿ ವಿಸ್ಮಿತ್ ಭಾಗವಹಿಸಿದರು. ಸುಬ್ರಹ್ಮಣ್ಯೇಶ್ವರ ಕಲಾ ಸಂಘ ವಗೆನಾಡು ಇದರ ಪದಾಧಿಕಾರಿಗಳು ಸಹಕರಿಸಿದ್ದರು.
©