ಪುತ್ತೂರು: ಪುತ್ತೂರಿನ ಸುದಾನ ಶಾಲೆಯಲ್ಲಿ ವಿದ್ಯಾರ್ಥಿಗಳು ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪೆಲ್ ಬಿ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಒಟ್ಟು 55 ಮಕ್ಕಳು ಜಿಲ್ಲಾ ಮಟ್ಟದ ಸ್ಪೆಲ್ ಬಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ ಫಾತಿಮ ಫಿದಾ(2ನೇ), ಅದ್ವಿಕಾ ಶೆಟ್ಟಿ (3ನೇ), ಸಂಭ್ರಮ್ ಎನ್ ವಿ (3ನೇ), ಎಂ. ಭಾರ್ಗವಿ ಸಿಂಹಾಚಲ ಶೆಣೈ (3ನೇ), ಪ್ರಥು ಕೆ(3ನೇ) ಜೆನಿಫರ್ ಮ್ಯಾಥ್ಯೂ (4ನೇ), ಮುಹಮ್ಮದ್ ಮೈಝ್ ಎಂ.ಜಿ (4ನೇ), ವೈಷ್ಣವಿ ಬಿ(4ನೇ), ಸಾಧ್ವಿ ಎಂ.ಡಿ (4ನೇ), ದತ್ತಚರಣ ಸಿ.ಎಸ್ (5ನೇ), ಆಕಾಶ್ ಮಯ್ಯ (5ನೇ), ಶ್ರೀರಾಂ ಪಿ.ಬಿ(5ನೇ), ಇಂಪನಾ ಸಿ. ಭಟ್(6ನೇ), ದರ್ಶಿಕಾ ನಾಯ್ಕ್ (6ನೇ), ಜೆಫ್ರಿ ಮ್ಯಾಥ್ಯೂ(7ನೇ), ಸಾನ್ವಿತಾ ಎಂ ರೈ(7ನೇ), ರಚನಾ ಯು.ಎ (8ನೇ), ಯಶ್ವಿ ಜೆ ಶೆಟ್ಟಿ(8ನೇ), ಸಮನ್ವಿತಾ ಶರ್ಮ(8ನೇ), ತ್ರಯಾ ಕೃಷ್ಣ ರಾಜ್ (9ನೇ) ರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ಶುಭ ಹಾರೈಸಿದ್ದಾರೆ.