ಕಾಣಿಯೂರು ಮದ್ಯವರ್ಜನಾ ಶಿಬಿರದ ಲೆಕ್ಕಪತ್ರ ಮಂಡನೆ, ಅಭಿನಂದನಾ ಸಭೆ

0

ಎಲ್ಲರ ಸಹಕಾರದಿಂದ ಶಿಬಿರ ಯಶಸ್ವಿಯಾಗಿ ಮೂಡಿಬರಲು ಸಾಧ್ಯವಾಗಿದೆ- ಉದಯ ರೈ ಮಾದೋಡಿ

  • ಎಲ್ಲರೂ ಭಾಗವಹಿಸಿ, ಪ್ರೋತ್ಸಾಹಿಸಿದ್ದರಿಂದ ಶಿಬಿರ ಯಶಸ್ವಿಯಾಗಿ ನಡೆದಿದೆ- ಮಹೇಶ್ ಕೆ ಸವಣೂರು

ಕಾಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆದ 1700ನೇ ಮದ್ಯಮರ್ಜನಾ ಶಿಬಿರದ ಲೆಕ್ಕಪತ್ರ ಮಂಡನೆ ಮತ್ತು ಅಭಿನಂದನೆ ಸಭೆ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು. ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರು, ನ್ಯಾಯವಾದಿ ಮಹೇಶ್ ಕೆ.ಸವಣೂರು ಮಾತನಾಡಿ, ಮದ್ಯವರ್ಜನ ಶಿಬಿರವನ್ನು ಆಯೋಜಿಸಲು ಕಾಣಿಯೂರಿಗೆ ಒದಗಿಬಂದಿದ್ದು, ನಮ್ಮ ಭಾಗ್ಯ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ, ಬೆನ್ನೆಲುಬಾಗಿದ್ದ ಕಾರಣ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ. ದುಶ್ಚಟಕ್ಕೆ ಬಲಿಯಾಗುತ್ತಿರುವ ಕುಟುಂಬವನ್ನು ಬೆಳಗಿಸುವ ಪುಣ್ಯದ ಕಾರ್ಯ ಈ ಮದ್ಯವರ್ಜನ ಶಿಬಿರದಿಂದ ಆಗಿದೆ ಎಂಬ ತೃಪ್ತಿ ನಮಗಿದೆ ಎಂದರು. ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಎಲ್ಲರ ಸಹಕಾರದಿಂದ ಶಿಬಿರವು ಯಶಸ್ವಿಯಾಗಿ ಸಂಭ್ರಮದಿಂದ ನಡೆದಿದೆ. ಎಲ್ಲರ ತನುಮನದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಯಶಸ್ವಿ ಮದ್ಯವರ್ಜನಾ ಶಿಬಿರಕ್ಕೆ ಕೈಜೋಡಿಸಿದ ಪ್ರತಿಯೊಬ್ಬರನ್ನು ಗೌರವಿಸುವುದು ನಮ್ಮ ಕರ್ತವ್ಯ. ಎಲ್ಲರ ಸಹಕಾರ, ಪ್ರೋತ್ಸಾಹ, ಸಂಘ ಸಂಸ್ಥೆಯವರು ಬೆನ್ನೆಲುಬಾಗಿದ್ದ ಕಾರಣ ಕಾರ್ಯಕ್ರಮ ಸುಂದರವಾಗಿ, ಯಶಸ್ವಿಯಾಗಿ ಮೂಡಿಬರಲು ಸಾಧ್ಯವಾಗಿದೆ ಎಂದರು. ಗೌರವಾಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕೋಶಾಧಿಕಾರಿ ಸುರೇಶ್ ಓಡಬಾಯಿ, ಉಪಾಧ್ಯಕ್ಷರಾದ ಗಣೇಶ್ ಉದನಡ್ಕ, ಲಲಿತಾ ದರ್ಖಾಸು, ರಾಜೀವಿ ಶೆಟ್ಟಿ, ಡಾ.ಸಾಜಿದಾ, ರಾಮಣ್ಣ ಗೌಡ ಮುಗರಂಜ, ವೇಣುಗೋಪಾಲ ಕಳುವಾಜೆ, ಚಾರ್ವಾಕ ಸಿ.ಎ ಬ್ಯಾಂಕ್ ಸಿಇಒ ಅಶೋಕ್ ಗೌಡ, ಲಕ್ಷ್ಮಣ ಗೌಡ ಮುಗರಂಜ, ನಾಗೇಶ್ ರೈ ಮಾಳ, ವಸಂತ ಪೆರ್ಲೋಡಿ, ಪರಮೇಶ್ವರ ಅನಿಲ, ಲೋಕನಾಥ್ ವಜ್ರಗಿರಿ, ಕಡಬ ತಾಲೂಕು ಕೇಂದ್ರ ಒಕ್ಕೂಟ ಸಮಿತಿಯ ಅಧ್ಯಕ್ಷ ಸಂತೋಷ್ ಕೆ, ಸವಣೂರು ವಲಯಾಧ್ಯಕ್ಷ ರಾಮಚಂದ್ರ ಇಡ್ಯಡ್ಕ, ಇಂದುಶೇಖರ್ ಶೆಟ್ಟಿ ಹಾಗೂ ಸಮಿತಿ ಸದಸ್ಯರು, ವಲಯ ಮೇಲ್ವೀಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಸವಣೂರು ವಲಯ ಮೇಲ್ವೀಚಾರಕಿ ಹರ್ಷಕುಮಾರಿ ಲೆಕ್ಕಪತ್ರ ಸಭೆಯ ಮುಂದಿಟ್ಟರು. ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here