ಒಳಮೊಗ್ರು: ಗ್ರಾ.ಪಂ ಸಾಮಾನ್ಯ ಸಭೆ

0

ಖಾಲಿ ಹುದ್ದೆಗೆ ಸಿಬ್ಬಂದಿಗಳ ನೇಮಕಾತಿ ಮಾಡುವಂತೆ ಸರ್ಕಾರಕ್ಕೆ ಬರೆಯಲು ನಿರ್ಣಯ
ಒಳಮೊಗ್ರು: ಗ್ರಾ.ಪಂ ನಲ್ಲಿ ಖಾಲಿ ಹುದ್ದೆಗೆ ಸಿಬ್ಬಂದಿಗಳ ನೇಮಕಾತಿ ಮಾಡುವಂತೆ ಸರ್ಕಾರಕ್ಕೆ ಬರೆಯಲು ಒಳಮೊಗ್ರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ಅ.30 ರಂದು  ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಒಳಮೊಗ್ರು ಗ್ರಾ.ಪಂ ನಲ್ಲಿ ಕಳೆದ ಎರಡು ವರ್ಷಗಳಿಂದ  ಗುಮಾಸ್ತ ಹಾಗೂ ಸ್ವಚ್ಚತಾಗಾರ ಹುದ್ದೆ ಖಾಲಿ ಇದ್ದು, ಈ ಹಿಂದೆ ಸರ್ಕಾರ ನೇರ ನೇಮಕಾತಿ ಮಾಡುತ್ತಿತ್ತು. ಆದರೆ ಈಗ ಸರ್ಕಾರವೂ ಮಾಡುತ್ತಿಲ್ಲ, ಪಂಚಾಯತ್ ಕಡೆಯಿಂದ ಮಾಡಲು ಬಿಡುತ್ತಿಲ್ಲ. ಇದರಿಂದ ಅಭಿವೃದ್ಧಿ ಅಧಿಕಾರಿ ಎಲ್ಲಾ ಕೆಲಸ ಮಾಡಬೇಕಾಗುತ್ತದೆ. ಕೆಲಸದ ಒತ್ತಡ ಹೆಚ್ಚಾಗುವುದರಿಂದ ಗ್ರಾಮದ ಅಭಿವೃದ್ಧಿ ಬಗ್ಗೆ ಗಮನಾರ್ಹರಿಸಲು ಕಷ್ಟಸಾಧ್ಯ. ಈ ದೃಷ್ಟಿಯಿಂದ ಗ್ರಾ.ಪಂ ನ ಖಾಲಿ ಇದ್ದ ಸಿಬ್ಬಂದಿಗಳ ನೇಮಕಾತಿ ಮಾಡುವಂತೆ ಸರ್ಕಾರಕ್ಕೆ ಬರೆಯಲು ಸದಸ್ಯ ಮಹೇಶ್ ರೈ ಕೇರಿ ಒತ್ತಾಯಿಸಿದರು. ಬಳಿಕ ಸಭೆಯಲ್ಲಿ ಚರ್ಚಿಸಿ ಸಿಬ್ಬಂದಿಗಳ ನೇಮಕಾತಿ ಮಾಡುವ ಬಗ್ಗೆ ಸರ್ಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ದಾರಿದೀಪ ದುರಸ್ತಿ ಬಗ್ಗೆ  ದರ ಪಟ್ಟಿ ಅಹ್ವಾನ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಜೆಜೆಎಂ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮದ  ಕೆಲವಡೆ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಪೈಪ್ ಅಳವಡಿಸುವ ಕಾಮಗಾರಿ ಪೂರ್ಣ ಆಗಿಲ್ಲ. ಮನೆ ಮನೆಗೆ ಹರ್ ಘರ್ ಜಲ್ ಘೋಷಣೆಯಾದ 90 ದಿನಗಳಲ್ಲಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ. ಆದರೆ ಇಷ್ಟರ ತನಕ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಕುಡಿಯುವ ನೀರಿನ ನಿರ್ವಹಣೆಗೆ ಕಷ್ಟಕರವಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖಾಧಿಕಾರಗಳಿಗೆ ಬರೆಯಲು ನಿರ್ಣಯ ಮಾಡುವಂತೆ ಹೇಳಿದರು. ಈ ಬಗ್ಗೆ ಚರ್ಚಿಸಿ ಸಂಬಂಧ ಪಟ್ಟ ಇಲಾಖಾಧಿಕಾರಗಳಿಗೆ ಬರೆಯಲು ನಿರ್ಣಯ  ಕೈಗೊಳ್ಳಲಾಯಿತು. ಸೆ.13 ರಂದು ಜಮಾಬಂಧಿ ಸಭೆ ನಡೆಸುವ ಬಗ್ಗೆ ಮತ್ತು ಸೆ.21 ರಂದು ಗ್ರಾಮ ಸಭೆ ಮಾಡುವ ಬಗ್ಗೆ ದಿನ ನಿಗದಿಪಡಿಸಲಾಯಿತು. ಸಭೆಯಲ್ಲಿ ಸದಸ್ಯರಾದ ಅಬ್ದುಲ್ ಸಿರಾಜುದ್ದೀನ್ ಪಿ, ಎಂ. ವಿನೋದ್ ಶೆಟ್ಟಿ,  ಶೀನಪ್ಪ ನಾಯ್ಡ, ಲತೀಫ್, ಬಿ.ಸಿ. ಚಿತ್ರ, ಶಾರದಾ, ರೇಖಾ ಕುಮಾರಿ, ಸುಂದರಿ, ಮಹೇಶ್ ರೈ ಕೇರಿ, ನಳಿನಾಕ್ಷಿ, ವನಿತ ಕುಮಾರಿ ಉಪಸ್ಥಿತರಿದ್ದರು.

ಅಭಿವೃದ್ಧಿ ಅಧಿಕಾರಿ ನಮಿತಾ ಸರಕಾರಿ ಸುತ್ತೋಲೆಗಳನ್ನು ಸಭೆಯಲ್ಲಿ ಓದಿ ಸ್ವಾಗತಿಸಿದರು. ಕಾರ್ಯದರ್ಶಿ ಜಯಂತಿ ಸಾರ್ವಜನಿಕ ಅರ್ಜಿಗಳನ್ನು ಸಭೆಯ ಮುಂದಿಟ್ಟು ವಂದಿಸಿದರು. ಗ್ರಾ.ಪಂ ಸಿಬ್ಬಂದಿಗಳಾದ ಗುಲಾಬಿ,  ಜಾನಕಿ, ಕೇಶವ ಸಹಕರಿಸಿದರು.

LEAVE A REPLY

Please enter your comment!
Please enter your name here