4.64 ಲಕ್ಷ ರೂ.ನಿವ್ವಳ ಲಾಭ; ಶೇ.25 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 75ಪೈಸೆ ಬೋನಸ್ ಘೋಷಣೆ
ರಾಮಕುಂಜ: ಕೊಯಿಲ ಗ್ರಾಮದ ಏಣಿತ್ತಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2022-23ನೇ ಸಾಲಿನ ಮಹಾಸಭೆಯು ಆ.31ರಂದು ಸಂಘದ ಆವರಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ನೀತಾ ಯನ್.ರವರು ಮಾತನಾಡಿ, ಸಂಘವು 2022-23ನೇ ಸಾಲಿನಲ್ಲಿ 4,64,478 ರೂ.ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 75ಪೈಸೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು. ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಆದಿತ್ಯರವರು ಹಾಲಿನ ಗುಣಮಟ್ಟ, ಜಾನುವಾರುಗಳ ವಿಮಾ ಸೌಲಭ್ಯ ಹಾಗೂ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಬಹುಮಾನ ವಿತರಣೆ:
2022-23ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ವಾರಿಜ ಆರ್.(ಪ್ರಥಮ), ಸುಂದರಿ ಎ.,(ದ್ವಿತೀಯ)ಹಾಗೂ ಶುಭ ಕೆ.,(ತೃತೀಯ)ಬಹುಮಾನ ಪಡೆದುಕೊಂಡರು. ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಸನ್ಮಾನ:
2022-23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡ ಸಂಘದ ಸದಸ್ಯರ ಮಕ್ಕಳಾದ ಅನ್ವಿತ್ ಸಬಳೂರು, ತೇಜಶ್ರೀ ಕೊಲ್ಯ ಓಕೆ, ಹರ್ಷಿತ್ ಯಸ್.ಸಬಳೂರು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷೆ ವಾರಿಜ ಆರ್., ನಿರ್ದೇಶಕರಾದ ಲಲಿತ ಪಿ., ಸುಶೀಲ ಬಿ.ಕೆ., ಪಾರ್ವತಿ ಪಿ., ಸುಂದರಿ ಎ., ಶಂಕರಿ ಎ., ಪ್ರೇಮಾವತಿ, ಜಯಂತಿ ಯಸ್, ರಾಜೀವಿ ಕೆ., ಶುಭ ಕೆ., ವೇದಾವತಿ ಪಿ.ಎಸ್.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪುಷ್ಪಾ ವರದಿ ಮಂಡಿಸಿದರು. ಹಾಲು ಪರೀಕ್ಷಕಿ ಹರಿಣಾಕ್ಷಿ ಸ್ವಾಗತಿಸಿ, ಸುಶೀಲ ಬಿ.ಕೆ.ವಂದಿಸಿದರು. ವೇದಾವತಿ ಪಿ.ಯಸ್.ಪ್ರಾರ್ಥಿಸಿದರು.