ಕಾವು ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಗ್ಗಿನ ಜಾವ ಹೆಚ್ಚುವರಿ ಬಸ್ ಹಾಕುವಂತೆ ಪುತ್ತಿಲ ಪರಿವಾರ ಕಾವು ಘಟಕದಿಂದ ಕೆಎಸ್ ಆರ್ ಟಿ ಸಿ ಗೆ ಮನವಿ

0

ಕಾವು: ಮಾಡ್ನೂರು ಗ್ರಾಮದ ಕಾವು ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪುತ್ತಿಲ ಪರಿವಾರ ಕಾವು ಘಟಕದಿಂದ ಪುತ್ತೂರು ಕೆಎಸ್ಆರ್ ಟಿಸಿಗೆ ಮನವಿ ಸಲ್ಲಿಸಲಾಯಿತು.


ಕಾವು-ಅಮ್ಚಿನಡ್ಕ-ನನ್ಯ-ಮದ್ಲ ಪ್ರದೇಶದಿಂದ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಪುತ್ತೂರು ನಗರದ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದು, ಬೆಳಗ್ಗಿನ ಜಾವ ಗಂಟೆ 7.30 ಯಿಂದ 9 ಗಂಟೆ ವೇಳೆಗೆ ಪುತ್ತೂರು-ಸುಳ್ಯ ರೂಟ್ ನಲ್ಲಿ ನಿಯಮಿತ ಬಸ್ ಸಂಚಾರವಿದ್ದು ಮತ್ತು ಆ ಬಸ್ ಗಳೆಲ್ಲಾ ಕಾವು ತಲುಪುವಷ್ಟರಲ್ಲಿ ಫುಲ್ ರಷ್ ಆಗಿ ಕಾವು-ನನ್ಯಮದ್ಲ‌ ಭಾಗದಲ್ಲಿ ಬಸ್ ನಿಲ್ಲಿಸದೇ ಇರುವುದರಿಂದ ವಿದ್ಯಾರ್ಥಿಗಳು ಗಂಟೆಗಟ್ಟಲೇ ರಸ್ತೆ ಬದಿಯಲ್ಲೇ ಕಾದು ಸಮಯಕ್ಕೆ ಸರಿಯಾಗಿ ತರಗತಿಗೆ ಹೋಗಲು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಳ್ಯ-ಪುತ್ತೂರು ರೂಟ್ ನಲ್ಲಿ ಬೆಳಗ್ಗಿನ ವೇಳೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಪುತ್ತಿಲ ಪರಿವಾರ ಕಾವು ಘಟಕದಿಂದ ಕೆಎಸ್ಆರ್ ಟಿಸಿ ಉಪವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಉಮೇಶ್ ವೀರಮಂಗಲ, ಪ್ರವೀಣ್ ಭಂಡಾರಿ, ಕೃಷ್ಣಪ್ರಸಾದ್ ಶೆಟ್ಟಿ, ಪ್ರವೀಣ್ ಘಾಟೆ, ಶರತ್ ನೆಲ್ಲಿತ್ತಡ್ಕ, ಹರೀಶ್ ಕುಂಜತ್ತಾಯ, ಯೋಗೀಶ್ ಕಾವು, ರವಿಪ್ರಸಾದ್ ಕಾವು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here