ಸವಣೂರು : ಸವಣೂರು ಗ್ರಾ.ಪಂ.ನಲ್ಲಿ 2022-23ನೇ ಅವಧಿಯಲ್ಲಿ ನಡೆಸಲಾದ ಕಾಮಗಾರಿಗಳನ್ನು ಜಿ.ಪಂ.ಯೋಜನಾಧಿಕಾರಿ ಸಂಧ್ಯಾ ಕೆ.ಎಸ್. ಅವರು ಪರಿಶೀಲನೆ ನಡೆಸಿದರು.
ಸವಣೂರು ಗ್ರಾಮದ ಮೊಗರು ಹಿ.ಪ್ರಾ.ಶಾಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ಮಿಸಲಾದ ಶಾಲಾ ಆವರಣ ಗೋಡೆ ಕಾಮಗಾರಿ ಮತ್ತು 15ನೇ ಹಣಕಾಸಿನ ಅನುದಾನದಲ್ಲಿ ನಿರ್ಮಾಣವಾದ ಶೌಚಾಲಯ ಕಾಮಗಾರಿ, ಪುಣ್ಚಪ್ಪಾಡಿ ಗ್ರಾಮದ ನಡುಮನೆಯಲ್ಲಿ ನಿರ್ಮಾಣವಾದ ಅಮೃತ ಉದ್ಯಾನವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್., ಉಪಾಧ್ಯಕ್ಷೆ ಜಯಶ್ರೀ ವಿಜಯ, ಅಭಿವೃದ್ಧಿ ಅಧಿಕಾರಿ ಕಮಲ್‌ರಾಜ್, ಎಂಜಿನಿಯರ್ ಎ.ಎಸ್.ಹುಕ್ಕೇರಿ, ಗ್ರಾ.ಪಂ.ಲೆಕ್ಕಸಹಾಯಕ ಎ.ಮನ್ಮಥ, ಗ್ರಾ.ಪಂ.ಸದಸ್ಯರಾದ ರಾಜೀವಿ ಶೆಟ್ಟಿ, ಅಬ್ದುಲ್ ರಝಾಕ್ ಕೆನರಾ, ರಫೀಕ್ ಎಂ.ಎ., ಬಾಬು ಎನ್., ಯಶೋಧಾ, ಚೆನ್ನು ಮುಂಡೋತ್ತಡ್ಕ, ಚಂದ್ರಾವತಿ ಸುಣ್ಣಾಜೆ ಹಾಗೂ ಗ್ರಾ.ಪಂ.ಸಿಬ್ಬಂದಿಗಳಾದ ಪ್ರಮೋದ್ ಕುಮಾರ್, ದಯಾನಂದ ಮಾಲೆತ್ತಾರು, ಯತೀಶ್ ಕುಮಾರ್ ಉಪಸ್ಥಿತರಿದ್ದರು.