ಹಿಂದಾರು ಜಯಗುರು ಆಚಾರ್‌ ಗೆ 2022-23ನೇ ಸಾಲಿನ ಪ್ರಥಮ ಉತ್ತಮ ಹೈನುಗಾರ ಪ್ರಶಸ್ತಿ

0

ಪುತ್ತೂರು: ಮುಂಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ‌ ಅವರು ದ.ಕ ಹಾಲು ಉತ್ಪಾದಕರ ಒಕ್ಕೂಟದ 2022-23ನೇ ಸಾಲಿನ ಉತ್ತಮ ಹೈನುಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆ.5ರಂದು ನಡೆದ ಒಕ್ಕೂಟದ ಮಹಾಸಭೆಯಲ್ಲಿ ಜಯಗುರು ಅವರಿಗೆ ಪ್ರಥಮ ಉತ್ತಮ ಹೈನುಗಾರ ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.

ನರಿಮೊಗರು ಸಾಂದೀಪನಿ ಶಾಲೆಯ ಸಂಚಾಲಕರಾದ ಹಿಂದಾರು ನಿವಾಸಿ ಭಾಸ್ಕರ್‌ ಆಚಾರ್‌ ಮತ್ತು ಸುಜಾತ ಆಚಾರ್‌ ಪುತ್ರರಾಗಿರುವ ಜಯಗುರು ಇಂಜಿನಿಯರಿಂಗ್‌ ಪದವೀಧರರು. ವಿವೇಕಾನಂದ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಮತ್ತು ಟೆಕ್ನಾಲಜಿಯಲ್ಲಿ ಸಿವಿಲ್‌ ಇಂಜಿನಿಯರ್‌ ಪದವಿ ಪಡೆದು, ಖಾಸಗಿ ಸಂಸ್ಥೆಯಲ್ಲಿ ವರ್ಷಗಳ ಕಾಲ ಇಂಜೀನಿಯರಿಂಗ್‌ ಆಗಿ ಉದ್ಯೋಗದಲ್ಲಿದ್ದರೂ ಕೃಷಿಯ ಕಡೆಗೆ ಆಕರ್ಷಿತರಾಗಿ ಉದ್ಯೋಗ ತೊರೆದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ರೋಟರಿ ಮತ್ತು ಇತರ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಜಯಗುರು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪ್ರಥಮ ಉತ್ತಮ ಹೈನುಗಾರ ಪ್ರಶಸ್ತಿ ಪಡೆದ ಸಾಧಕರಾಗಿದ್ದಾರೆ. ಪ್ರಶಸ್ತಿ ವಿತರಣೆ ವೇಳೆ ಒಕ್ಕೂಟದ ಅಧ್ಯಕ್ಷ ಸುಚೆರಿತ ಶೆಟ್ಟಿ, ಉಪಾಧ್ಯಕ್ಷ ಎಸ್ ಬಿ ಜಯರಾಮ ರೈ, ನಿರ್ದೇಶಕ ನಾರಾಯಣ ಪ್ರಕಾಶ್‌ ಪಾಣಾಜೆ, ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಕಾಂತ್‌ ಆಚಾರ್‌ ಹಿಂದಾರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here