ಸವಣೂರು ವಲಯ ಮಟ್ಟದ ಖೋ ಖೋ ಪಂದ್ಯಾಟ

0

ಪುತ್ತೂರು: ಸವಣೂರು ವಲಯ ಮಟ್ಟದ ಖೋ ಖೋ ಪಂದ್ಯಾಟವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ನಾರಾಯಣ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯ ಎಂ ದಿನೇಶ ಗೌಡ, ಪುತ್ತೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ ,ಸಿ ಆರ್ ಪಿ ಪರಮೇಶ್ವರಿ , ಸವಣೂರು ವಲಯದ ಪ್ರಾರ್ಥಮಿಕ ಹಾಗೂ ಪ್ರೌಢ ವಿಭಾಗದ ನೊಡಲ್ ಅಧಿಕಾರಿಗಳಾದ ಬಾಲಕೃಷ್ಣ ಸವಣೂರು ಹಾಗೂ ಸಹದೇವ ಸರ್ವೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ಆರ್, ಪುತ್ತೂರು ತಾಲೂಕು ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್, ಇ ಸಿ ಓ ಹರಿಪ್ರಸಾದ್ ಆಗಮಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಾರ್ಗದರ್ಶನ ನೀಡಿದರು.ಪುತ್ತೂರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಮುಖ್ಯ ಗುರು ಶುಭಲತಾ ಸ್ವಾಗತಿಸಿ, ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿ, ಫೆಲ್ಸಿಟಾ ಡಿಕುನ್ಹಾ ವಂದಿಸಿದರು.


ಖೋ ಪಂದ್ಯಾಟದ ನಿರ್ಣಾಯಕರಾಗಿ ಲಕ್ಷ್ಮಿ ಕೆಟಿ ಕಾಣಿಯೂರು, ಕೃಷ್ಣಪ್ರಸಾದ್ ಕುಂಬ್ರ, ಸಹದೇವ ಸರ್ವೆ, ಜಯಚಂದ್ರ ಕಾಣಿಯೂರು, ನವೀನ್ ರೈ, ಬಾಲಕೃಷ್ಣ ಕೆ. ಸವಣೂರು, ರಾಧಾಕೃಷ್ಣ ಪುರುಷರ ಕಟ್ಟೆ, ಸಿದ್ದಲಿಂಗಮ್ಮ ಭಕ್ತ ಕೋಡಿ ನಿರ್ವಹಿಸಿದರು.

ಫಲಿತಾಂಶ:
ಸವಣೂರು ವಲಯ ಮಟ್ಟದ ಖೋ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಹಾಗೂ ದ್ವಿತೀಯ ಸ್ಥಾನವನ್ನು ಪ್ರಗತಿ ಎಜುಕೇಶನ್ ಟ್ರಸ್ಟ್ ಕಾಣಿಯೂರು ಪಡೆದುಕೊಂಡರು.

ಬಾಲಕಿಯರ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಪ್ರಥಮ ಸ್ಥಾನವನ್ನು ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here