ಬೀದಿ ಬದಿಯ ಪ್ರಥಮ ಹಂತದ ಕಿರುಸಾಲ ಪಡೆದವರಿಗೆ ತರಬೇತಿ ಕಾರ್ಯಕ್ರಮ

0

ಪುತ್ತೂರು: ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿಯ ವ್ಯಾಪಾರಕ್ಕೆ ಪ್ರಥಮ ಹಂತದ ಕಿರುಸಾಲ ಪಡೆದ ಫಲಾನುಭವಿಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವ ಬಗ್ಗೆ ಮತ್ತು ಇದರಿಂದ ದೊರೆಯುವ 8 ಕಲ್ಯಾಣ ಯೋಜನೆಗಳ ಸೌಲಭ್ಯಗಳ ಬಗ್ಗೆ ತರಬೇತಿ ಕಾರ್ಯಕ್ರಮ ಸೆ.8ರಂದು ನಗರಸಭೆಯ ಸಭಾಭವನದಲ್ಲಿ ನಡೆಯಿತು.

ಪೌರಾಯುಕ್ತ ಮಧು ಎಸ್ ಮನೋಹರ್ ರವರು ಗಿಡಕ್ಕೆ ನೀರೆರೆಯುವ ಮೂಲಕ ತರಬೇತಿಗೆ ಚಾಲನೆ ನೀಡಿ ಪಿ.ಎಂ. ಸ್ವ-ನಿಧಿಯ ಸೌಲಭ್ಯವನ್ನು ಪಡೆಯುವ ವಿಧಾನದ ಬಗ್ಗೆ ವಿವರಿಸಿದರು. ಕೆನರಾ ಬ್ಯಾಂಕ್ ನ ಅರುಣ್, ಉತ್ತಮ್, ವನಜಾ ಪ್ರಸಾದ್ ಮತ್ತು ಎಸ್‌ಬಿಐ ಬ್ಯಾಂಕಿನ ಕಾವ್ಯ, ಆಶಾ, ರಮಣ್ ಕುಮಾರ್ ರವರು ಪ್ರಧಾನ ಮಂತ್ರಿ ಭಿಮಾ ಯೋಜನೆ ಹಾಗೂ ಇತರೇ ಯೋಜನೆಗಳ ಬಗ್ಗೆ ಮತ್ತು ಡಿಜಿಟಲ್ ವ್ಯವಹಾರದ ಮಹತ್ವ ಹಾಗೂ ಕ್ಯೂ ಆರ್ ಕೋಡ್ ಬಳಕೆ ಬಗ್ಗೆ ಮಾಹಿತಿ ನೀಡಿದರು. ಫಲಾನುಭವಿಗಳಿಗೆ ಬ್ಯಾಂಕಿನ ಪ್ರತಿನಿಧಿಗಳು ಸಾಂಕೇತಿಕವಾಗಿ ಕ್ಯೂ ಆರ್ ಕೋಡ್ ವಿತರಿಸಿದರು. ಸಮುದಾಯ ಸಂಘಟನಾಧಿಕಾರಿ ಕರುಣಾಕರ ವಿ. ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮಿ ಬೇಕಲ್ ರವರು ವಂದಿಸಿದರು. ರಮಣಿ, ಸಿಆರ್‌ಪಿಗಳಾದ ಧನ್ಯಶ್ರೀ, ಮಮತ, ತಾರಾ ಮತ್ತು ಸಂತೋಷ್ ಸಹಕರಿಸಿದರು.

LEAVE A REPLY

Please enter your comment!
Please enter your name here