ವಿಟ್ಲದ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಸ್ನೇಹ ಎಲೆಕ್ಟ್ರಾನಿಕ್ಸ್ ನ ನಾಲ್ಕನೇ ಮಳಿಗೆ ಶುಭಾರಂಭ

0

ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿ ಸ್ನೇಹ ಎಲೆಕ್ಟ್ರಾನಿಕ್ಸ್ ನ ನಾಲ್ಕನೇ ಮಳಿಗೆ ಶುಭಾರಂಭಗೊಂಡಿತು‌. ಸಂಸ್ಥೆಯನ್ನು ಮೊಹಮ್ಮದ್ ನಾಸಿರ್ ದಾರಿಮಿ ವಿಟ್ಲರವರು ಉದ್ಘಾಟಿಸಿದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ರವರು ದೀಪ ಬೆಳಗಿಸಿ ಸಂಸ್ಥೆಗೆ ಶುಭಹಾರೈಸಿದರು. ಬಂಟ್ವಾಳ ಕೃಷಿಕ ಸಮಾಜದ ತಾಲೂಕು ಕಾರ್ಯದರ್ಶಿ ರಮಾನಾಥ ವಿಟ್ಲ, ಎಸ್.ಬಿ.ಐ. ವಿಟ್ಲ ಶಾಖಾ ಮ್ಯಾನೇಜರ್ ಕೃಷ್ಣ ಕಿಶೋರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಗಣೇಶ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

ಶುಭಾರಂಭದ ಪ್ರಯುಕ್ತ ಆಫರ್:
ಸ್ನೇಹ ಎಲೆಕ್ಟ್ರಾನಿಕ್ಸ್ ಆರಂಭದಲ್ಲಿ ಬಿಸಿರೋಡಿನಲ್ಲಿ ತನ್ನ ಪ್ರಥಮ ಮಳಿಗೆಯನ್ನು ತೆರೆಯಿತು. ಆ ಬಳಿಕ ಪರೆಂಗಿಪೇಟೆ, ಮಡಂತ್ಯಾರ್ ನಲ್ಲಿ ಮಳಿಗೆಯನ್ನು ಆರಂಭಿಸಿತು. ಅತೀ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಗ್ರಾಹಕರಿಗೆ ನೀಡುತ್ತಿರುವ ನಿಟ್ಟಿನಲ್ಲಿ ಹಾಗೂ ಉತ್ತಮ ಸೇವೆ ನೀಡುತ್ತಾ ಮನೆಮಾತಾಗಿರುವ ಸಂಸ್ಥೆ ಇದೀಗ ವಿಟ್ಲದಲ್ಲಿ ತನ್ನ ನಾಲ್ಕನೇ ಮಳಿಗೆಯನ್ನು ಆರಂಭಿಸಿದೆ. ಶುಭಾರಂಭದ ಪ್ರಯುಕ್ತ ಸಂಸ್ಥೆಯಲ್ಲಿ ಗ್ರಾಹಕರಿಗಾಗಿ ಉತ್ತಮ ಆಫರ್ ಗಳನ್ನು ನೀಡಲಾಗುತ್ತಿದ್ದ, ಈ ಭಾಗದ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here