ರಸ್ತೆ ಸುರಕ್ಷತೆ, ಸಂಚಾರಿ ನಿಯಮ ಪಾಲನೆ ನಮ್ಮ ಜೀವನದ ಅಂಗವಾಗಬೇಕು-ಪ್ರಕಾಶ್ ಕಾರಂತ
ಪುತ್ತೂರು: ವಾಹನ ಅಪಘಾತ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳನ್ನು ಪಾಲಿನೆ ಮಾಡುವುದು ನಮ್ಮ ಜೀವನದ ಒಂದು ಅಂಗವಾಗಬೇಕು. ಇದು ಬಹಳ ಸರಳ ಹಾಗೂ ಪ್ರಾಮುಖ್ಯತೆ ಅಂಶವಾಗಿದ್ದು ಪ್ರತಿಯೊಬ್ಬರ ಹೃದಯದಿಂದ ಆಗಬೇಕು. ಇನ್ನೊಬ್ಬರನ್ನು ಧೂಷಣೆ ಮಾಡುವುದಲ್ಲ ಎಂದು ರೋಟರಿ ಕ್ಲಬ್‌ನ ನಿಟಕಪೂರ್ವ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ ಹೇಳಿದರು.
\
ರೋಟರಿ ಕ್ಲಬ್ ಪುತ್ತೂರು ಯುವ, ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇದರ ವತಿಯಿಂದ ಸಂಚಾರಿ ಪೊಲೀಸ್ ಠಾಣೆ, ರೋಟರಿ ಕ್ಲಬ್ ಪಬ್ಲಿಕ್ ಇಮೇಜ್ & ರೋಡ್ ಸೇಫ್ಟೀ ಎವೆರ್‌ನೆಸ್ ಹಾಗೂ ರಾಮಕೃಷ್ಣ ಪ್ರೌಢ ಶಾಲೆ ಇಂಟರ‍್ಯಾಕ್ಟಡ್ ಕ್ಲಬ್ ಪುತ್ತೂರು ಇದರ ಜಂಟೀ ಸಂಯೋಜನೆಯಲ್ಲಿ ಸೆ.೯ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆದ ರಸ್ತೆ ಸುರಕ್ಷತೆ ಮತ್ತು ಸಂಚಾರಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಸಂಖ್ಯೆ ಅಧಿಕವಾದಂತೆ ವಾಹನಗಳ ಸಂಖ್ಯೆಯೂ ಅಧಿಕವಾಗುತ್ತದೆ. ವಾಹನ ಸಂಖ್ಯೆ ಅಧಿಕವಾದಂತೆ ಅಪಘಾತ ಸಾಮಾನ್ಯವವಾಗಲಿದೆ. ಅಪಘಾತದಲ್ಲಿ ಒಬ್ಬರ ತಪ್ಪ ಇದ್ದೇ ಇರುತ್ತದೆ. ವಾಹನ ಅಪಘಾತ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲನೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುವುದು ಇಂದಿನ ಜೀವನದ ಪ್ರಮುಖ ಆವಶ್ಯಕತೆಗಳಲ್ಲಿ ಒಂದಾಗಿದೆ. ಇದರ ಬಗ್ಗೆ ಅರಿವು ಮೂಡಿಸುವುದು ಪ್ರಸ್ತುತವಾದುದು ಎಂದರು.
ಮುಖ್ಯ ಅತಿಥಿಯಾಗಿದ್ದ ಡಿವೈಎಸ್‌ಪಿ ಡಾ.ಗಾನಾ ಪಿ.ಕುಮಾರ್ ಮಾತನಾಡಿ, ಒಂದು ಕ್ಷಣದ ಆತುರದ ತಪ್ಪು ನಿರ್ದಾರಗಳು ಅಪಘಾತಕ್ಕೆ ಕಾರಣವಾಗುತ್ತದೆ. ಪ್ರತಿ ಅಪಘಾತಕ್ಕೂ ಒಂದೊಂದು ಕಾರಣವಿರುತ್ತದೆ. ವಾಹನ ಚಾಲನೆಯ ಸಮಯದಲ್ಲಿ ನಮ್ಮ ಜೀವ ನಮ್ಮ ಕೈಯಲ್ಲಿರುತ್ತದೆ. ಜೊತೆಗೆ ಇನ್ನೊಬ್ಬರ ಜೀವ ರಕ್ಷಣೆಯೂ ಪ್ರಾಮುಖ್ಯವಾಗಿದ್ದು ಪ್ರತಿಯೊಬ್ಬರೂ ಸಂಚಾರಿ ನಿಯಮ ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುವ ಮೂಲಕ ವಾಹನ ಅಪಘಾತ ನಿಯಂತ್ರಿಸಬೇಕು ಎಂದು ಹೇಳಿದರು.
ರಾಮಕೃಷ್ಣ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಭವಿಷ್ಯದ ದೃಷ್ಠಿಯಿಂದ ವಿದ್ಯಾರ್ಥಿಗಳಲ್ಲಿ ಸಂಚಾರಿ ನಿಯಮ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವುದಯ ರೋಟರಿ ಕ್ಲಬ್‌ನ ಸಮಾಜಮುಖಿ ಚಟುವಟಿಕೆಗಳು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ರೋಟರಿ ಕ್ಲಬ್‌ನ ಸಹ ತರಬೇತುದಾರ ಶೇಖರ್ ಶೆಟ್ಟಿ, ಸಂಚಾರಿ ಪೊಲೀಸ್ ಉಪ ನಿರೀಕ್ಷಕ ಕುಟ್ಟಿ ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳ ಮಾಹಿತಿ ನೀಡಿದರು.
ಸನ್ಮಾನ:
ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ಸಂಚಾರಿ ಪೊಲೀಸ್ ಉಪನಿರೀಕ್ಷಕ ಕುಟ್ಟಿ ಹಾಗೂ ರೋಟರಿ ಕ್ಲಬ್‌ನ ಸಹ ತರಬೇತುದಾರ ಶೇಖರ್ ಶೆಟ್ಟಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಹಾಯಕ ಗವರ್ನರ್ ನರಸಿಂಹ ಪೈ, ಇನ್ನರ್‌ವ್ಹೀಲ್ ಕಾರ್ಯದರ್ಶಿ ಶ್ರೀದೇವಿ ರೈ, ರಾಮಕೃಷ್ಣ ಪ್ರೌಢಶಾಲಾ ಮುಖ್ಯಗುರು ಜಯಲಕ್ಷ್ಮಿ, ಯುವ ಇಂಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಪ್ರಕೃತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಪಶುಪತಿ ಶರ್ಮ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಹರ್ಷ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ರೋಟರಿ ಕ್ಲಬ್‌ನ ವಿನೀತ್ ಶೆಣೈ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ವಂದಿಸಿದರು. ಸದಸ್ಯೆ ವಚನಾ ಕಾರ್ಯಕ್ರಮ ನಿರೂಪಿಸಿದರು. ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.