ಅಧ್ಯಕ್ಷ ರಾಜೇಶ್ ಬನ್ನೂರು, ಕಾರ್ಯಾಧ್ಯಕ್ಷ: ಮುರಳೀಕೃಷ್ಣ ಹಸಂತ್ತಡ್ಕ, ಸಂಚಾಲಕ: ಪಿ.ಜಿ. ಜಗನ್ನಿವಾಸ ರಾವ್, ಪ್ರ.ಕಾರ್ಯದರ್ಶಿ: ಅಜಿತ್ ರೈ ಹೊಸಮನೆ
ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದ ನವರಾತ್ರಿ ಉತ್ಸವದ ಪೂರ್ವಾಭಾವಿ ಸಭೆಯು ಸೆ.8ರಂದು ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್ ಅಧ್ಯಕ್ಷತೆಯಲ್ಲಿ ಮಂದಿರದಲ್ಲಿ ನಡೆಯಿತು.
ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 88 ವರ್ಷದಿಂದ ಮಂದಿರದಲ್ಲಿ ನವರಾತ್ರಿ ಉತ್ಸವ, ಶಾರದೆ ವಿಗ್ರಹ ಪ್ರತಿಷ್ಠೆ, ಶೋಭಾಯಾತ್ರೆ ನಡೆಯುತ್ತಿದ್ದು, ಈ ವರ್ಷದಿಂದ ಉತ್ಸವಕ್ಕೆ ಹೊಸ ಸಮಿತಿ ರಚನೆ ಮಾಡುವ ಜತೆಗೆ 10 ದಿನದ ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ಶೋಭಾಯಾತ್ರೆಯನ್ನು ವಿಜೃಂಭಣೆಯಿಂದ ನಡೆಸಿ ಉತ್ಸವಕ್ಕೆ ಮೆರುಗು ನೀಡುವಂತೆ ಸೂಚಿಸಲಾಯಿತು. ಉತ್ಸವ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಬನ್ನೂರು, ಉಪಾಧ್ಯಕ್ಷರಾಗಿ ದಯಾನಂದ ಆದರ್ಶ, ನಯನಾ ರೈ ನೆಲ್ಲಿಕಟ್ಟೆ, ಕಾರ್ಯದರ್ಶಿಯಾಗಿ ಅಜಿತ್ ರೈ ಹೊಸಮನೆ, ಜತೆ ಕಾರ್ಯದರ್ಶಿಯಾಗಿ ಎಂ. ಗೋಪಾಲಕೃಷ್ಣ ಈಶ, ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಸಂಚಾಲಕರಾಗಿ ಪಿ.ಜಿ. ಜಗನ್ನಿವಾಸ ರಾವ್, ಕಾರ್ಯಾಧ್ಯಕ್ಷರಾಗಿ ಮುರಳಿಕೃಷ್ಣ ಹಸಂತ್ತಡ್ಕರವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರುಗಳಾಗಿ ಉದಯಕುಮಾರ್ ಹೆಚ್., ರಾಧಾಕೃಷ್ಣ ನಂದಿಲ, ಗಣೇಶ್ ಆಚಾರ್ಯ, ದಿನೇಶ್ ಪಂಜಿಗ, ದೇವದಾಸ್ ಕೆ., ಸುಧೀರ್ ಕಲ್ಲಾರೆ, ದಿನೇಶ್ ಜೈನ್, ನಿತಿನ್ ಮಂಗಳಾ, ಹರಿಣಾಕ್ಷಿ ಜೆ. ಶೆಟ್ಟಿ, ಹೆಚ್. ವಿಜಯಾ, ಶಾರದಾ ಕೇಶವರವರುಗಳು ಆಯ್ಕೆಯಾದರು.
ಸಭೆಯಲ್ಲಿ ರಮಾನಂದ ರಾವ್, ಯಶವಂತ್ ಆಚಾರ್ಯ, ರಾಧಾಕೃಷ್ಣ ರಾವ್, ಗೋಪಾಲ ಆಚಾರ್ಯ, ಗೋಪಾಲ ನಾಕ್, ಜಯಕಿರಣ್, ಶ್ರೀಧರ ಆಚಾರ್ಯ, ಪಕೀರ ಗೌಡ, ಜಲಜಾಕ್ಷಿ ಎನ್. ಹೆಗ್ಡೆ, ಭರತ್, ಶ್ರುತಿ, ಸುನಿತಾ, ಸುಧೀರ್ ನೋಂಡಾ, ನಿಖಿಲ್ ರಾಜ್, ಜಿ. ಮಹಾಬಲ ರೈ ಒಳತ್ತಡ್ಕ, ಯೋಗಾನಂದ ರಾವ್, ದಯಾನಂದ ಹೆಗ್ಡೆ ಬನ್ನೂರು, ಎನ್. ಗಣಪತಿ ನಾಯಕ್, ಪದ್ಮನಾಭ ಜಿ, ಸುದರ್ಶನ್ ಮುರ, ರಾಮಣ್ಣ ಗೌಡ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು. ಮಂದಿರದ ಕೋಶಾಧಿಕಾರಿ ತಾರನಾಥ್ ಎಚ್ ವಂದಿಸಿದರು, ಸದಸ್ಯ ಅಶೋಕ್ ಕುಂಬ್ಲೆ ಕಾರ್ಯಕ್ರಮ ನಿರೂಪಿಸಿದರು.