ಬೆಳಂದೂರು ಗ್ರಾ.ಪಂ.ಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ- ವಿವಿಧ ಬೇಡಿಕೆಗಳ ಮನವಿ ಸ್ವೀಕಾರ

0

ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ – ಭಾಗೀರಥಿ ಮುರುಳ್ಯ

ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್‌ಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸೆ.9ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು. ಬಳಿಕ ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಾಸಕರು, ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮದ ಜನತೆಯ ಸಹಕಾರವು ಅಗತ್ಯ. ಬೇಡಿಕೆಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲರ ಸಹಕಾರದಲ್ಲಿ ಗ್ರಾ.ಪಂ.ಅಭಿವೃದ್ಧಿಯತ್ತ ಸಾಗಲಿ ಎಂದರು. ಗ್ರಾ.ಪಂ.ಅಧ್ಯಕ್ಷೆ ಪಾರ್ವತಿ ಮರಕ್ಕಡ, ಸದಸ್ಯರಾದ ಮೋಹನ್ ಅಗಳಿ, ಕುಸುಮಾ ಅಂಕಜಾಲು, ತೇಜಾಕ್ಷಿ ಕೊಡಂಗೆ, ವಿಠಲ ಗೌಡ ಅಗಳಿ, ಜಯರಾಮ ಬೆಳಂದೂರು, ಹರಿಣಾಕ್ಷಿ ಬನಾರಿ, ಗೌರಿ ಮಾದೋಡಿ, ಜಿ.ಪಂ.ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಕಾಣಿಯೂರು ಗ್ರಾ.ಪಂ.ಸದಸ್ಯ ಗಣೇಶ್ ಉದನಡ್ಕ, ಮುರುಳ್ಯ ಸಿ.ಎ ಬ್ಯಾಂಕ್ ನಿರ್ದೇಶಕ ವಸಂತ ನಡುಬೈಲು, ಕುಶಾಲಪ್ಪ ಗೌಡ ಕಳುವಾಜೆ, ಅಚ್ಯುತ್ತ ಗೌಡ ಕಂಪ ಕಳುವಾಜೆ, ಭಾಸ್ಕರ ಕಳುವಾಜೆ, ವೇಣುಗೋಪಾಲ ಕಳುವಾಜೆ, ಯಶವಂತ್ ಕಳುವಾಜೆ, ಬೆಳಂದೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷೆ ಚಂಪಾಕುಶಾಲಪ್ಪ ಅಬೀರ, ಗ್ರಾ.ಪಂ.ಮಾಜಿ ಅಧ್ಯಕ್ಷ ನಝೀರ್ ದೇವಸ್ಯ, ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಜಯಂತ ಅಬೀರ ಸ್ವಾಗತಿಸಿ, ಸದಸ್ಯೆ ಉಮೇಶ್ವರಿ ಅಗಳಿ ವಂದಿಸಿದರು. ಗ್ರಾ.ಪಂ.ಲೆಕ್ಕ ಸಹಾಯಕಿ ಸುನಂದಾ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಬೇಡಿಕೆಗಳ ಮನವಿ: ಬೆಳಂದೂರು ಗ್ರಾ.ಪಂ. ನೂತನ ಕಟ್ಟಡ ನಿರ್ಮಾಣಕ್ಕೆ ಪಂಚಾಯತ್ ವತಿಯಿಂದ, ಬೈತಡ್ಕದಲ್ಲಿರುವ ಪಶು ಚಿಕಿತ್ಸಾ ಕೇಂದ್ರದಲ್ಲಿ ಖಾಲಿಯಿರುವ ವೈದ್ಯರ ಸಹಿತ ಎಲ್ಲಾ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಜಗದೀಶ್ ಅಗಳಿಯವರು ಹಾಗೂ ಬೆಳಂದೂರು ಗ್ರಾ.ಪಂ.ನಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿಯಾಗಿರುವ ಸುನಂದರವರನ್ನು ಕಡಬ ತಾಲೂಕು ಪಂಚಾಯತ್ ಕಚೇರಿಗೆ ನಿಯೋಜಿಸಿರುವುದನ್ನು ರದ್ದು ಮಾಡುವಂತೆ ನವಾಜ್ ಪಳ್ಳತ್ತಾರು, ನಝೀರ್ ದೇವಸ್ಯ ಶಾಸಕರಿಗೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here