– ವರ್ತಕರು ಸಮಾಜಮುಖಿ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕು-ಜೋನ್ ಕುಟಿನ್ಹಾ
ಪುತ್ತೂರು: ವ್ಯಾಪಾರದಲ್ಲಿ ಲಾಭ ಗಳಿಸುವುದು ಪ್ರಮುಖ ಉದ್ಧೇಶವಾದರೂ ಲಾಭ ಗಳಿಸಿರುವುದರಲ್ಲಿ ಸ್ವಲ್ಪ ಪಾಲು ಸಮಾಜಮುಖಿ ಕಾರ್ಯಗಳತ್ತ ತೊಡಗಿಸಿಕೊಂಡು ಮತ್ತೊಬ್ಬರ ಮುಖದಲ್ಲಿ ನಗುವನ್ನು ಉಂಟು ಮಾಡುವುದು ಕೂಡ ವರ್ತಕರ ಉದ್ಧೇಶವಿರಬೇಕು ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 43ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಜೋನ್ ಕುಟಿನ್ಹಾರವರು ಹೇಳಿದರು.
ಸೆ.10ರಂದು ರಾಧಾಕೃಷ್ಣ ಮಂದಿರ ರಸ್ತೆ ಬಳಿಯ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ೪೩ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾಮಾರಿ ಕೊರೋನಾದಿಂದಾಗಿ ಸಂಘದ ಕಾರ್ಯನಿರ್ವಹಣೆಗೆ ಸ್ವಲ್ಪ ಹಿನ್ನೆಡೆಯಾಗಿತ್ತು. ನನ್ನ ಅಧಿಕಾರಾವಧಿಯಲ್ಲಿ ದೇವರ ಆಶೀರ್ವಾದ ಹಾಗೂ ಪದಾಧಿಕಾರಿಗಳ, ಸದಸ್ಯರ ಸಹಕಾರದಿಂದಾಗಿ ಸಂಘವನ್ನು ಯಶಸ್ವಿಯತ್ತ ಮುನ್ನೆಡೆಸಲು ಸಾಧ್ಯವಾಗಿದೆ. ಸಂಘಕ್ಕೆ ಸ್ವಂತ ಜಾಗ, ಕಟ್ಟಡವನ್ನು ಹೊಂದಿ ಅದರಲ್ಲಿ ಸಂಘದ ಸಭೆಯು ನಡೆಸುವುದು ನಮ್ಮ ಆಶಯವಾಗಿದೆ ಮತ್ತು ಆದಷ್ಟು ಬೇಗ ಇದು ಕೈಗೂಡಲಿ ಎಂದರು.
ಮಾಜಿ ಅಧ್ಯಕ್ಷರುಗಳಿಗೆ ಗೌರವ:
ಈ ಸಂದರ್ಭದಲ್ಲಿ ಸಂಘವನ್ನು ಮುನ್ನೆಡೆಸಿದ ಹಿರಿಯ ಮಾಜಿ ಸದಸ್ಯರಾದ ವಿ.ಕೆ ಜೈನ್, ಕೇಶವ ಪೈ, ಲೋಕೇಶ್ ಹೆಗ್ಡೆರವರಿಗೆ ಹೂ ನೀಡಿ ಗೌರವಿಸಲಾಯಿತು.
ನೂತನ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ:
2022-23ನೇ ಸಾಲಿನಲ್ಲಿ ಸಂಘಕ್ಕೆ ಸೇರ್ಪಡೆಯಾದ ವರ್ತಕರಾದ ಅಮೃತ್ ಕುಮಾರ್, ಪ್ರವೀಣ್ ಅಮೈ, ವೆಂಕಟ್ರಮಣ ಗೌಡ ಕಳುವಾಜೆ, ಗೋವಿಂದಪ್ರಕಾಶ್ ಸಾಯ, ಭಾಗ್ಯೇಶ್ ರೈ, ಪ್ರವೀಣ್ ಎ, ಕೃಷ್ಣಾನಂದ ನಾಯಕ್, ರವಿರಾಜ್ ಭಟ್, ಕೆ.ಎಸ್ ಜೋಶಿರವರುಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿತು. ಸವಿತಾ ಪೈರವರು ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಪಿ.ವಾಮನ್ ಪೈ ಹಾಗೂ ಸೂರ್ಯನಾಥ ಆಳ್ವ, ಕಾರ್ಯದರ್ಶಿ ನೌಶಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಜೋನ್ ಕುಟಿನ್ಹಾ ಸ್ವಾಗತಿಸಿ, ನೂತನ ಕಾರ್ಯದರ್ಶಿ ಮನೋಜ್ ಟಿ.ವಿ ವಂದಿಸಿದರು. ಸಂಘದ ಸದಸ್ಯರಾದ ಸೂರ್ಯನಾಥ ಆಳ್ವ, ಆಸ್ಕರ್ ಆನಂದ್, ಮಹಾದೇವ ಶಾಸ್ತ್ರಿ, ಪುತ್ತೂರು ಉಮೇಶ್ ನಾಯಕ್, ಸಂತೋಷ್ ಶೆಟ್ಟಿರವರು ಸನ್ಮಾನಿತರ ಪರಿಚಯ ಮಾಡಿದರು. ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ ವರದಿ ಮಂಡಿಸಿದರು. ಕೋಶಾಧಿಕಾರಿ ರಾಜೇಶ್ ಕಾಮತ್ ಲೆಕ್ಕಪತ್ರ ಮಂಡಿಸಿದರು. ವಿಶ್ವಪ್ರಸಾದ್ ಸೇಡಿಯಾಪು ಹಾಗೂ ಶ್ರೀಕಾಂತ್ ಕೊಳತ್ತಾಯ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ವರ್ತಕ ಸದಸ್ಯರಿಗೆ ಸನ್ಮಾನ..
ಈ ಸಂದರ್ಭದಲ್ಲಿ ಹಿರಿಯ ವರ್ತಕರಾದ ಪುತ್ತೂರಿನ ವಿದ್ಯುತ್ ಗುತ್ತಿಗೆದಾರರ ಸಂಘದ ಸ್ಥಾಪಕ ಅಧ್ಯಕ್ಷರೂ ಹಾಗೂ ಸುಧಾ ಎಲೆಕ್ಟಿçಕಲ್ಸ್ ಮಾಲಕ ಬಾಲಕೃಷ್ಣ ಕೊಳತ್ತಾಯ, ಅಡಿಕೆ ವ್ಯಾಪಾರಸ್ಥ ಹಾಗೂ ಸಾಲ್ಮರ ಕೊಟೇಚಾ ಹಾಲ್ ಮಾಲಕ ಶಶಾಂಕ ಕೊಟೇಚಾ, ಎಪಿಎಂಸಿ ರಸ್ತೆಯಲ್ಲಿನ ವರದರಾಜ ಟ್ರೇಡರ್ಸ್ ಮಾಲಕ ಇಂದಾಜೆ ವಿನಾಯಕ ನಾಯಕ್, ಸುರಯ್ಯ ಡ್ರೆಸಸ್ ಮಾಲಕ ಅಬ್ದುಲ್ ಖಾದರ್ ಕೊಡಂಗಾಯಿ, ಎಪಿಎಂಸಿ ರಸ್ತೆಯಲ್ಲಿನ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ಮಾಲಕ ವಲೇರಿಯನ್ ಡಾಯಸ್‌ರವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪೈಕಿ ಬಾಲಕೃಷ್ಣ ಕೊಳತ್ತಾಯವರು ಅನಿಸಿಕೆ ವ್ಯಕ್ತಪಡಿಸಿದರು.