ಸೆ.17 : ಮಾಡಾವು ಅಯ್ಯಪ್ಪ ಭಜನಾ ಮಂದಿರದ ಬಳಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಕ್ರೀಡಾಕೂಟ

0

ಪುತ್ತೂರು : ಅಯ್ಯಪ್ಪ ಭಕ್ತ ವೃಂದ ಹಾಗೂ ಅಭಿನವ ಕೇಸರಿ ಮಾಡಾವು ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ವಿವಿಧ ಕ್ರೀಡಾಕೂಟ ಮಾಡಾವು ಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಬಳಿ ಸೆ.17ರಂದು ನಡೆಯಲಿದೆ.ಬೆಳಿಗ್ಗೆ 8.30ರಿಂದ ಕ್ರೀಡಾಕೂಟ ಆರಂಭವಾಗಲಿದ್ದು ಬೆಳಿಗ್ಗೆ 10ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.

ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ ಅವರ ಅಧ್ಯಕ್ಷತೆಯಲ್ಲಿ ಜ್ಯೋತಿ ಚಿಕಿತ್ಸಾಲಯದ ಡಾ| ರಾಮಚಂದ್ರ ಭಟ್ ಉದ್ಘಾಟಿಸುವರು.

ಅತಿಥಿಗಳಾಗಿ ಕೆಯ್ಯೂರು ಗ್ರಾ.ಪಂ.ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಮಾಜಿ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಜನ್ಮ ಫೌಂಡೇಶನ್‌ನ ಹರ್ಷ ಕುಮಾರ್ ರೈ ,ಕೆಯ್ಯೂರು ಗ್ರಾ.ಪಂ.ನ ಮಾಜಿ ಸದಸ್ಯ ಮೋಹನ ರೈ ಬೇರಿಕೆ, ಸದಸ್ಯೆ ಮೀನಾಕ್ಷಿ ರೈ ,ಅಭಿನವ ಕೇಸರಿ ಮಾಡಾವು ಇದರ ಉಪಾಧ್ಯಕ್ಷ ಹರೀಶ್ ಕುಲಾಲ್ ನೆಲ್ಲಿಗುರಿ ಪಾಲ್ಗೊಳ್ಳುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಡಾವು ಅಯ್ಯಪ್ಪ ಭಕ್ತವೃಂದದ ಅಧ್ಯಕ್ಷ ಸುಬ್ರಾಯ ಗೌಡ ವಹಿಸುವರು.ಅತಿಥಿಗಳಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ,ಪುತ್ತೂರು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ,ಮಾಡಾವು ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ರವೀಂದ್ರ ರೈ ನೆಲ್ಯಾಜೆ, ಕೆದಂಬಾಡಿ-ಕೆಯ್ಯೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಶಿವರಾಮ ರೈ ಕಜೆ,ಕೆಯ್ಯೂರು ಗ್ರಾ.ಪಂ.ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಮಯೂರ,ಮಾಡಾವು ಅಭಿನವ ಕೇಸರಿ ಅಧ್ಯಕ್ಷ ಶಶಿಧರ ಆಚಾರ್ಯ ಮಾಡಾವು ಪಾಲ್ಗೊಳ್ಳುವರು.

ಕ್ರೀಡಾಕೂಟ
ಪಂದ್ಯಾಟಗಳು ಕೆಯ್ಯೂರು, ಪಾಲ್ತಾಡಿ, ಕೆದಂಬಾಡಿ ಗ್ರಾಮಸ್ಥರಿಗೆ ಸೀಮಿತವಾಗಿದ್ದು,ಪುರುಷರ ವಿಭಾಗದಲ್ಲಿ ಮಡಕೆ ಒಡೆಯುವುದು,ಜಾರು ಕಂಬ ನಡಿಗೆ,ಕಬಡ್ಡಿ ,ವಾಲಿಬಾಲ್, ಹಗ್ಗಜಗ್ಗಾಟ,ನಗರಕ್ಕೆ ಬಾಂಬ್ ,ಮಹಿಳೆಯರ ವಿಭಾಗದಲ್ಲಿ ಮಡಕೆ ಒಡೆಯುವುದು,ಸಂಗೀತ ಕುರ್ಚಿ,ಲಿಂಬೆ ಚಮಚ ಓಟ,ನಗರಕ್ಕೆ ಬಾಂಬ್,ಹಗ್ಗಜಗ್ಗಾಟ ಹಾಗೂ ಮಕ್ಕಳ ವಿಭಾಗದಲ್ಲಿ ಭಕ್ತಿ ಗೀತೆ,ಸಂಗೀತ ಕುರ್ಚಿ,ನಗರಕ್ಕೆ ಬಾಂಬ್, ಲಿಂಬೆ ಚಮಚ ಓಟ ನಡೆಯಲಿದೆ. ಜಾರು ಕಂಬ ನಡಿಗೆಯಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here