ವಿಟ್ಲ: ಈ ಭಾರಿಯ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೊಳ್ನಾಡು ಗ್ರಾಮದ ನಾರ್ಶ ಶಾಲೆಯ ಅಧ್ಯಾಪಕರಾದ ಗೋಪಾಲಕೃಷ್ಣ ನೇರಳಕಟ್ಟೆ ರವರನ್ನು ಕೊಳ್ನಾಡು ಗ್ರಾಮ ಪಂಚಾಯತ್ ವತಿಯಿಂದ ಶಾಲೆಯಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿರವರು ಮಾತನಾಡಿ ಶುಭ ಹಾರೈಸಿದರು. ಬಳಿಕ ಅವರು ಶಾಲೆಯ ಕುಂದು ಕೊರತೆಗಳ ಬಗ್ಗೆ ಅದ್ಯಾಪಕರೊಂದಿಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ಅಶ್ರಪ್. ಕೆ.ಸಾಲೆತ್ತೂರು, ಮಾಜಿ ಅದ್ಯಕ್ಷರಾದ ನೆಬಿಸಾ ಖಾದರ್,ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಇಸ್ಮಾಯಿಲ್ ನಾರ್ಶ,ಸಿಂಗಾರಿ ಸಮೂಹ ಸಂಸ್ಥೆಗಳ ಮಾಲಕ ಇಕ್ಬಾಲ್ ಸಿಂಗಾರಿ ನಾರ್ಶ, ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅದ್ಯಕ್ಷರಾದ ಯಾಕೂಬ್ ನಾರ್ಶ,ಸೋಮಶೇಖರ್ ಗೌಡ ತಾಳಿತ್ತನೂಜಿ,ಹಸೈನಾರ್ ತಾಳಿತ್ತನೂಜಿ, ಪ್ರಾಂಶುಪಾಲರಾದ ಅವಿಟಾ ರೀಟಾ ಡಿ.ಸೋಜಾ,ಮುಖ್ಯೋಪಾಧ್ಯಾಯರಾದ ಲತಾ, ಶಿಕ್ಷರಾದ ಶರತ್ ಚೌಟ ದೇವಸ್ಯ,ದೈಹಿಕ ಶಿಕ್ಷರಾದ ರಪೀಕ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಲತಾ ಸ್ವಾಗತಿಸಿ, ಗೋಪಾಲಕೃಷ್ಣ ನೇರಳಕಟ್ಟೆ ವಂದಿಸಿದರು.