ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ

0

ಪುತ್ತೂರು ವಾಣಿಜ್ಯ ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಪಿ. ವಾಮನ ಪೈ, ಪ್ರ.ಕಾರ್ಯದರ್ಶಿಯಾಗಿ ಮನೋಜ್ ಟಿವಿ

ಪುತ್ತೂರು: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಮತ್ತು ನಿರ್ದೇಶಕರುಗಳ ಆಯ್ಕೆ ನಡೆಯಿತು. ಸೆ.10ರಂದು ಬಪ್ಪಳಿಗೆ ರಾಧಾಕೃಷ್ಣ ಮಂದಿರ ರಸ್ತೆ ಬಳಿಯ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿದ ಮಹಾಸಭೆಯಲ್ಲಿ ವಿರೋಧವಾಗಿ ಆಯ್ಕೆ ನಡೆಸಲಾಯಿತು.

ನೂತನ ಪದಾಧಿಕಾರಿಗಳು:
ಸಂಘದ ನೂತನ ಅಧ್ಯಕ್ಷರಾಗಿ ದರ್ಬೆ ಗಣೇಶ್ ಟ್ರೇಡರ‍್ಸ್ ಮಾಲಕ ಪಿ. ವಾಮನ ಪೈ, ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್ ಎಂಟರ್‌ಪ್ರೈಸಸ್‌ನ ಮಾಲಕ ಮನೋಜ್ ಟಿವಿ, ಕೋಶಾಧಿಕಾರಿಯಾಗಿ ಮೋಹನ್ ಕೋಲ್ಡ್ ಹೌಸ್‌ನ ರಾಜೇಶ್ ಕಾಮತ್, ಉಪಾಧ್ಯಕ್ಷರುಗಳಾಗಿ ಪದ್ಮ ಟ್ರೇಡರ‍್ಸ್‌ನ ಎಮ್. ಸೂರ್ಯನಾಥ ಆಳ್ವ, ವಿವಿಧ್ ಎನರ್ಜಿ ಸಿಸ್ಟಮ್‌ನ ರವಿಕೃಷ್ಣ ಡಿ. ಕಲ್ಲಾಜೆ, ಕಾರ್ಯದರ್ಶಿಗಳಾಗಿ ಮಹಮ್ಮದ್ ನೌಶಾದ್ ಹಾಜಿ ಹಾಗೂ ಮಾರ್ಕ್ ಟೆಲಿಕಾಮ್‌ನ ಶಶಿರಾಜ್ ರೈರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಕಾವೇರಿ ಎಂಟರ್‌ಪ್ರೈಸಸ್‌ನ ಶ್ರೀಕಾಂತ್ ಕೊಳತ್ತಾಯ, ಸೇಡಿಯಾಪು ಆಗ್ರೋ ಸೇಲ್ಸ್‌ನ ವಿಶ್ವಪ್ರಸಾದ್ ಸೇಡಿಯಾಪು, ಅಶ್ವಿಜಾ ಎಂಟರ್‌ಪ್ರೈಸಸ್‌ನ ಪಿ. ಉಲ್ಲಾಸ್ ಪೈ, ಕುಲ್ಯಾಡಿಕಾರ‍್ಸ್‌ನ ಆರ್.ರಾಮಚಂದ್ರ ನಾಯಕ್, ಶಾಸ್ತ್ರಿ ಆಂಡ್ ಕಂ.ಯ ಕೆ. ಸೀತಾರಾಮ್ ಶಾಸ್ತ್ರಿ, ಫಾಯಿದ ಟ್ರೇಡರ‍್ಸ್‌ನ ಉಮರ್ ಫಾರೂಕ್, ಮೇಘ ಸೆಂಟರ್‌ನ ಆಸ್ಕರ್ ಆನಂದ್, ಅಸ್ಮಿ ಟವರ‍್ಸ್‌ನ ಸಂತೋಷ್ ಶೆಟ್ಟಿ, ವಿನ್ನರ್ ಸಾಫ್ಟ್ ಡ್ರಿಂಕ್ಸ್‌ನ ರಮೇಶ್ ಪ್ರಭು, ಮುಳಿಯ ಜ್ಯುವೆಲ್ಸ್‌ನ ಕೃಷ್ಣ ನಾರಾಯಣ ಮುಳಿಯ, ಉಮೇಶ್ ನಾಯಕ್, ಲ್ಯಾಂಡ್ ಲಿಂಕ್‌ನ ಸದಾನಂದ ನಾಯ್ಕ್, ಮಣಿಲಾ ಕನ್‌ಸ್ಟ್ರಕ್ಷನ್ ಮತ್ತು ಆಗ್ರೋ ಸೇಲ್ಸ್‌ನ ಮಹಾದೇವ ಶಾಸ್ತ್ರಿ, ಆರ್‌ಎಚ್. ಸೆಂಟರ್‌ನ ಗೋಪಾಲ ಎಂ.ಯು., ಮೋಹನ್ ಗ್ರಾಫಿಕ್ಸ್‌ನ ಮೋಹನ್ ಎಂ. ಹಾಗೂ ಪ್ರಸನ್ನ ಪ್ರೆಸ್‌ನ ಗುರುರಾಜ್ ಕೆ.ರವರು ಆಯ್ಕೆಯಾಗಿದ್ದಾರೆ. ಮಾಜಿ ಅಧ್ಯಕ್ಷರಾದ ಜಾನ್ ಕುಟಿನ್ಹಾರವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಪಿ.ವಾಮನ ಪೈ:
100 ವರ್ಷಕ್ಕೂ ಮಿಕ್ಕಿ ಉದ್ಯಮದಲ್ಲಿರುವ, ಪಿ. ಗೋಪಾಲ ಪೈ ಸ್ಥಾಪಿತ ಪುತ್ತೂರಿನ ಪ್ರಸಿದ್ಧ ಪಿ.ಸಿ.ಪೈ ಬ್ರದರ್ಸ್ ಸಮೂಹ ಸಂಸ್ಥೆಗಳ ೩ನೇ ತಲೆಮಾರಿನ ಸದಸ್ಯರಾದ ವಾಮನ ಪೈರವರು ದರ್ಬೆಯಲ್ಲಿರುವ ಗಣೇಶ್ ಟ್ರೇಡರ‍್ಸ್ ಮತ್ತು ಉಜಿರೆಯಲ್ಲಿರುವ ಪಿ.ಸಿ.ಪೈ ಪೆಟ್ರೋಲ್ ಪಂಪ್‌ನ ಆಡಳಿತ ಪಾಲುದಾರರಾಗಿದ್ದಾರೆ. ನೆಹರೂನಗರ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಸಮಿತಿ ನಿರ್ದೇಶಕರಾಗಿ, ದ.ಕ. ಮತ್ತು ಉಡುಪಿ ಜಿಲ್ಲಾ ಪೆಟ್ರೋಲಿಯಂ ಡೀಲರ‍್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ, ಪುತ್ತೂರು ಜೆಸಿಐ ಅಧ್ಯಕ್ಷರಾಗಿ, ಪುತ್ತೂರು ರೋಟರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಪುತ್ತೂರು ಜಿಎಸ್‌ಬಿ ಸಭಾದ ಅಧ್ಯಕ್ಷರಾಗಿದ್ದಾರೆ.

ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಸಹಕಾರ
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಪ್ರಸ್ತುತ 400 ಸದಸ್ಯರಿದ್ದಾರೆ. ಈ ಸದಸ್ಯತ್ವವನ್ನು ಒಂದು ಸಾವಿರಕ್ಕೆ ಏರಿಸುವುದು ನಮ್ಮ ಗುರಿ. ಸಂಘದ ಸದಸ್ಯರಿಗೆ ಸಮೂಹ ವಿಮೆ, ಸದಸ್ಯರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಎಲ್ಲಾ ಇಲಾಖೆಗಳೊಂದಿಗೆ ಸೌಹಾರ್ದಯುತವಾಗಿ ಸಹಕರಿಸುತ್ತೇವೆ. ಪುತ್ತೂರಿಗೆ ಮೆಡಿಕಲ್ ಕಾಲೇಜು, ಹೊಸ ಕೈಗಾರಿಕಾ ವಲಯ, ಕೊಯಿಲಕ್ಕೆ ಪಶುಸಂಗೋಪನಾ ಕಾಲೇಜು ಹಾಗೂ ಕೇಂದ್ರ, ರಾಜ್ಯ ಸರಕಾರದ ಎಲ್ಲಾ ಯೋಜನೆಗಳನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇವೆ. ಮಂಗಳೂರಿನ ಕೆನರಾ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್‌ನೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಸದಸ್ಯರಿಗೆ ಜಿಎಸ್‌ಟಿ ಮತ್ತು ಇನ್‌ಕಮ್‌ಟ್ಯಾಕ್ಸ್‌ನ ಸಂಪೂರ್ಣ ಮಾಹಿತಿ ಕಾರ್ಯಾಗಾರ ನಡೆಸುತ್ತೇವೆ.
—ಪಿ.ವಾಮನ ಪೈ
ಅಧ್ಯಕ್ಷರು, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ

LEAVE A REPLY

Please enter your comment!
Please enter your name here