ಪುತ್ತೂರು: ಪುತ್ತೂರು ನೆಹರುನಗರ ಶಿವನಗರದಲ್ಲಿ ಕಾರ್ಯಾಚರಿಸುತ್ತಿರುವ ಶಿವಮಣಿ ಕಲಾಸಂಘದ 2ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸೆ.10 ರಂದು ಲಿಂಗನ ಗುಡ್ಡೆ ಶ್ರೀ ಸೋಮಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು.
ಬೆಳಗ್ಗೆ ಶ್ರೀ ಸೋಮಲಿಂಗೇಶ್ವರ ಮಂದಿರದ ಅಧ್ಯಕ್ಷ ಚಂದ್ರಶೇಖರ್ ನಾಯಕ್ ಶ್ರೀದೇವರಿಗೆ ಪ್ರಾರ್ಥನೆ ಮಾಡಿ, ತೆಂಗಿನ ಕಾಯಿ ಒಡೆಯುವುದರ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಉದ್ಯಮಿ ವಸಂತ ಪೂಜಾರಿ ಶೇವಿರೆ, ಉಪ್ಪಿನಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿ ಗುತ್ತು, ಸೋಮಲಿಂಗೇಶ್ವರ ಮಂದಿರದ ಕಾರ್ಯದರ್ಶಿ ರಾಮಕೃಷ್ಣ ಗೌಡ, ತೀರ್ಪುಗಾರರಾದ ಯನ ರೈ, ಹೀರಾ ಉದಯ್ ಕುಮಾರ್, ಚೇತನ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿವಮಣಿ ಕಲಾ ಸಂಘದ ಅಧ್ಯಕ್ಷ ಸುದರ್ಶನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿವಮಣಿ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವನ ಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಅತಿಥಿಗಳು ಆಟೋಟ ಸ್ಪರ್ಧೆಗಳ ನಡೆಯಿತು. ಇದೇ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರವರು ಅಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ನವೀನಾಂಜಲಿ ತಂಡದಿಂದ ಭಕ್ತಿ ರಸಮಂಜರಿ ನಡೆಯಿತು. ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ವಿದ್ಯಾನಿಧಿ ಸಹಾಯಧನ ವಿತರಣೆ:
ಕಾರ್ಯಕ್ರಮದಲ್ಲಿ ಅರ್ಪಿನಿ ಗುತ್ತು ಅಶೋಕ್ ಕುಮಾರ್ ರೈ ಅವರು ನೀಡಿದ ವಿದ್ಯಾನಿಧಿ ಸಹಾಯಧನವನ್ನು ನಾಲ್ಕು ಮಂದಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹಂಚಲಾಯಿತು. ಬಳಿಕ ನಡೆದ ಅಟೋಟ ಸ್ಪರ್ಧೆಗಳನ್ನು ಚೇತನ್ ಕುಮಾರ್ ರವರು ನಡೆಸಿಕೊಟ್ಟರು.
ಸಂಜೆ ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸಕ ಶ್ರೀಕೃಷ್ಣ ಉಪಾದ್ಯಾಯ ಧಾರ್ಮಿಕ ಉಪನ್ಯಾಸ ನೀಡಿದರು. ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಹಿಂದುತ್ವದ ಒಗ್ಗಟ್ಟು, ಅವಶ್ಯಕತೆಗಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಯಂತಹ ಧಾರ್ಮಿಕ ಹಬ್ಬಗಳ ಆಚರಣೆ ನಿರಂತರ ನಡೆಯಬೇಕೆಂದು ಆಶಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್ ಶುಭ ಹಾರೈಸಿದರು.
ಸನ್ಮಾನ, ಬಿರುದು ಗೌರವ:
ನಿವೃತ್ತ ಮುಖ್ಯ ಶಿಕ್ಷಕ ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕ ಹಾಗೂ ಸುದ್ದಿಬಿಡುಗಡೆಯ ಪ್ರತಿಭಾರಂಗ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ, ಭರತನಾಟ್ಯ ವಿದುಷಿ ಕು. ವೈಷ್ಣವಿ ನಾಯಕ್, ರಕ್ತೇಶ್ವರೀ ವಠಾರ ಅಂಗನವಾಡಿ ಶಿಕ್ಷಕಿ ಶ್ರೀಮತಿ ರಮಾ ಟೀಚರ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇದರ ಜೊತೆಗೆ ನಾರಾಯಣ ರೈ ಕುಕ್ಕುವಳ್ಳಿಯವರಿಗೆ “ಜ್ಞಾನ ಸಾಗರ” ಬಿರುದನ್ನು ನೀಡಿ ಗೌರವಿಸಲಾಯಿತು. ಶಿವಮಣಿ ಕಲಾ ಸಂಘದ ಶ್ರೀಮಾನ್ ಹಾಗೂ ಮಾಸ್ಟರ್ ಕೃತ್ವಿಕ್ ರವರಿಗೆ ೨೦೨೨-೨೩ ಸಾಲಿನ” ಸ್ಟಾರ್ ಅಪ್ ಶಿವಮಣಿ ಅವಾರ್ಡ್” ನೀಡಲಾಯಿತು. ವೇದಿಕೆಯಲ್ಲಿದ್ದ ಅತಿಥಿಗಳು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಶಿವಮಣಿ ಕಲಾ ಸಂಘದ ಉಪಾದ್ಯಕ್ಷ ಕಲಾವಿದ ಕೃಷ್ಣಪ್ಪ ವಂದಿಸಿದರು.