ಸವಣೂರು : ಸವಣೂರು ಗ್ರಾ.ಪಂ.ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಸಂದೇಶ್ ಕೆ.ಎನ್ ಕರ್ತವ್ಯಕ್ಕೆ ಹಾಜರು

0

ಸವಣೂರು : ಸವಣೂರು ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕಡಬ ತಾಲೂಕಿನ ಕೊಯಿಲ ಗ್ರಾ.ಪಂ.ಪಿಡಿಒ ಸಂದೇಶ್ ಕೆ.ಎನ್ ಅವರು ಆಗಮಿಸಿ ಸೆ.13ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಪುತ್ತೂರು ತಾಲೂಕಿನ ಬನ್ನೂರು ನಿವಾಸಿಯಾಗಿರುವ ಸಂದೇಶ್ ಕೆ.ಎನ್.ಅವರು 2011ರ ಜನವರಿಯಲ್ಲಿ ಸುಳ್ಯ ತಾಲೂಕಿನ ಪಂಜ ಗ್ರಾ.ಪಂ.ಗೆ ಪಿಡಿಒ ಆಗಿ ನೇಮಕಗೊಂಡಿದ್ದರು. ಅಲ್ಲಿ 3 ವರ್ಷ ಕರ್ತವ್ಯ ನಿರ್ವಹಿಸಿದ್ದ ಅವರು, ಬಳಿಕ ಉಬರಡ್ಕ, ನಂತರ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಗೆ ವರ್ಗಾವಣೆಗೊಂಡು ಆಗಮಿಸಿದ್ದರು. ಸುಳ್ಯದಲ್ಲಿ ಪಿಡಿಒ ಆಗಿದ್ದ ವೇಳೆಯಲ್ಲಿ ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಪ್ರಭಾರ ಸಹಾಯಕ ನಿರ್ದೇಶಕರಾಗಿ, ಪ್ರಭಾರ ವಿಷಯ ನಿರ್ವಾಹಕರಾಗಿಯೂ ಸೇವೆ ಸಲ್ಲಿಸಿದ್ದರು. ಅಜ್ಜಾವರ ಗ್ರಾ.ಪಂ.ನಲ್ಲೂ ಪ್ರಭಾರ ಪಿಡಿಒ ಆಗಿ ಸೇವೆ ಸಲ್ಲಿಸಿದ್ದರು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನಲ್ಲಿ ನಾಲ್ಕು ವರ್ಷಗಳಿಂದ ಪಿಡಿಒ ಆಗಿದ್ದರು.ಈ ವೇಳೆ ಬೆಟ್ಟಂಪಾಡಿ ಗ್ರಾ.ಪಂ.ಪ್ರಭಾರ ಪಿಡಿಒ ಆಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಕೊಯಿಲ ಗ್ರಾ.ಪಂ.ಪಿಡಿಒ ಆಗಿ ವರ್ಗಾವಣೆಗೊಂಡಿದ್ದು, ಇದೀಗ ಸವಣೂರು ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸವಣೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯಾಗಿದ್ದ ಕಮಲರಾಜ್ ಅವರಿಗೆ ವರ್ಗಾವಣೆಯಾಗಿದ್ದರಿಂದ ಹುದ್ದೆ ಖಾಲಿಯಾಗಿತ್ತು.

LEAVE A REPLY

Please enter your comment!
Please enter your name here