ಮುಕ್ರಂಪಾಡಿ ರಿಕ್ಷಾ ಪಲ್ಟಿ – ಪ್ರಯಾಣಿಕರಿಗೆ ಗಾಯ

0

ಪುತ್ತೂರು: ಮುಕ್ರಂಪಾಡಿ ಸಮಿಪ ಆಟೋ ರಿಕ್ಷಾವೊಂದು ಚಾಲಕನ ಹತೋಟಿ ತಪ್ಪಿ ಮಗುಚಿ ಬಿದ್ದ ಘಟನೆ ಸೆ.15ರಂದು ನಡೆದಿದೆ. ಅಪಘಾತದಿಂದಾಗಿ ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ.


ನಿಯಂತ್ರಣ ಕಳೆದುಕೊಂಡ ಸುಂದರರವರ ರಿಕ್ಷಾ ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದ ಬಳಿ ಪಲ್ಟಿಯಾಗಿತ್ತು. ಅಪಘಾತದಿಂದಾಗಿ ಆಟೋ ರಿಕ್ಷಾದಲ್ಲಿದ್ದ ಕೆಮ್ಮಿಂಜೆ ನಿವಾಸಿ ಪ್ರತೀಕ್ಷಾ ಮತ್ತು ಅನ್ನಪೂರ್ಣ ಹಾಗು ಚಾಲಕ ಸುಂದರ ಅವರು ಗಾಯಗೊಂಡಿದ್ದಾರೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here