ಪುತ್ತೂರು: ಗಣೇಶ ಚತುರ್ಥಿ ಪ್ರಯುಕ್ತ ಚಿತ್ರಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗಾನಸಿರಿ ಕಲಾ ಕೇಂದ್ರ ಪುತ್ತೂರು ವತಿಯಿಂದ ಸೆ. 19 ರಂದು ಅಪರಾಹ್ನ 3.00 ರಿಂದ ಬೊಳುವಾರಿನಲ್ಲಿರುವ ಗಾನಸಿರಿ ಕಲಾ ಚಾವಡಿಯಲ್ಲಿ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ. ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಕಿರಿಯ ವಿಭಾಗ(1 ರಿಂದ 4 ನೇ ತರಗತಿ ವರೆಗೆ)ಹಿರಿಯ ವಿಭಾಗ (5 ರಿಂದ 7 ನೇ ತರಗತಿ ವರೆಗೆ) ಪ್ರೌಢ ವಿಭಾಗ (8 ರಿಂದ 10 ನೇ ತರಗತಿ ವರೆಗೆ)ಭಾಗವಹಿಸುವ ವಿದ್ಯಾರ್ಥಿಗಳಿಗೆ ಸ್ಕೂಲ್ ಐಡಿ ಕಡ್ಡಾಯ.
ಕಿರಿಯ ವಿಭಾಗಕ್ಕೆ ಪೆನ್ಸಿಲ್ ಶೇಡಿಂಗ್, ಕ್ರೆಯಾನ್ಸ್ ಬಳಸಬಹುದು. ಹಿರಿಯ ವಿಭಾಗಕ್ಕೆ ಪೆನ್ಸಿಲ್ ಶೇಡಿಂಗ್, ಕ್ರೆಯಾನ್ಸ್, ಬಣ್ಣದ ಪೆನ್ಸಿಲ್ ಬಳಸಬಹುದು. ಪ್ರೌಢವಿಭಾಗಕ್ಕೆ ಜಲವರ್ಣ ಕಡ್ಡಾಯಚಿತ್ರ ರಚನೆಗೆ ಹಾಳೆ ನೀಡಲಾಗುವುದು. ಉಳಿದಂತೆ ಎಲ್ಲಾ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿಯನ್ನು ಆಯ್ಕೆ ಮಾಡಲಾಗುವುದು.ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು…
ಆಸಕ್ತರು ಸೆ. 17 ರ ಸಾಯಂಕಾಲ 6ರೊಳಗೆ9901555893, 8548865835 ಸಂಖ್ಯೆಗೆ ವಾಟ್ಸಾಪ್ ಮೂಲಕ ಹೆಸರು ನೋಂದಾಯಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಸಮಯಾವಕಾಶ : ಕಿರಿಯ, ಹಿರಿಯ ವಿಭಾಗ ದವರಿಗೆ 60 ನಿಮಿಷ… ಪ್ರೌಢ ವಿಭಾಗ ಕ್ಕೆ 90 ನಿಮಿಷ ಎಂದು ಪ್ರಕಟಣೆ ತಿಳಿಸಿದೆ.