ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಮತ್ತು ವಿವಿಧ ವಿಶ್ವಕರ್ಮ ಸಮಾಜ ಸೇವಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ದಿನಾಚರಣೆಯು ಸೆ.17ರಂದು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಸೀಲ್ದಾರ್ ಶಿವಶಂಕರ ದೀಪ ಪ್ರಜ್ವಲನೆ, ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ದೈವತ್ವ, ನಾಗರಿಕತೆಗೆ ವಿಶ್ಚಕರ್ಮರ ಕೊಡುಗೆ ಅಪಾರ:
ನ್ಯಾಯವಾದಿ ಕೆ.ಎಂ ಗಂಗಾಧರ ಆಚಾರ್ಯ ಕೊಂಡೆವೂರು ಸಂಸ್ಮರಣಾ ಉಪನ್ಯಾಸ ನೀಡಿದರು. ಭಕ್ತಿ ಮತ್ತು ಪ್ರೀತಿಯ ಆಚರಣೆಯ ಮಹತ್ವ ವಿಶ್ವಕರ್ಮ ದಿನಾಚರಣೆಯಲ್ಲಿ ಕಾಣಬಹುದು. ದೇಶದಲ್ಲಿ ದೈವತ್ವ ಮತ್ತು ನಾಗರಿಕತೆಗೆ ವಿಶ್ವಕರ್ಮ ಬ್ರಾಹ್ಮಣರ, ಶಿಲ್ಪಿಗಳ ಕೊಡುಗೆ ಅಪಾರವಾಗಿದೆ. ಲಂಕೆ, ದ್ವಾರಕೆ, ಸ್ವರ್ಗಲೋಕ ಸಹಿತ ಹಲವಾರು ನಿರ್ಮಾತೃಗಳಾಗಿರುವ ವಿಶ್ವಕರ್ಮರು ಹುಟ್ಟಿದಾಗಿನಿಂದಲೇ ಇಂಜಿನಿಯರ‍್ಸ್ ಆಗಿದ್ದಾರೆ. ಕೃಷಿಕ್ಷೇತ್ರದಲ್ಲಿ ನಮಗೆ ರೈತರೇ ಬೆನ್ನಲುಬು, ಆದರೆ ರೈತರಿಗೆ ವಿಶ್ವಕರ್ಮರು ಬೆನ್ನೆಲುಬಾಗಿ ಕಾಣಿಸಿಕೊಳ್ಳುತ್ತಾರೆ. ಯಾಕೆಂದರೆ ರೈತರ ಕೃಷಿ ಚಟುವಟಿಕೆಗಳ ಪರಿಕರಗಳನ್ನು ವಿಶ್ವರ್ಕಮರೇ ಮಾಡಿಕೊಡಬೇಕಾಗಿದೆ ಎಂದ ಅವರು ರಾಜಪರಂಪರೆಗೂ ವಿಶ್ವಕರ್ಮ ಗುರುವಾಗಿ ಕಾಣಿಸಿಕೊಳ್ಳುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲೂ ಶಿಲ್ಪಕಲೆಗಳು ವಿಶ್ವಕರ್ಮರಿಂದಲೇ ಆಗಬೇಕಾಗಿದೆ ಹಾಗಾಗಿ ವಿಶ್ವಕರ್ಮರು ಸಮಾಜದಲ್ಲಿ ದೇವ ರೂಪದಲ್ಲಿ ಕೊಟ್ಟ ವಿಶೇಷ ಕೊಡುಗೆಗಳಿವೆ. ದೇವರ ಹೆಸರಿನಲ್ಲಿರುವ ಏಕೈಕ ಸಮುದಾಯ ಅದು ವಿಶ್ವಕರ್ಮ ಸಮುದಾಯ. ಆಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದಲ್ಲೂ ಪುತ್ತೂರಿನ ಸೇವೆ ಇದೆ. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ರೂ.13ಸಾವಿರ ಕೋಟಿ ವಿಶ್ವಕರ್ಮ ಯೋಜನೆಯನ್ನು ನೀಡಿರುವುದು ನಮ್ಮ ಸಮಾಜದ ಏಳಿಗೆಗೆ ಪೂರಕವಾಗಿದೆ. ಅವರಿಗೆ ಅಭಿನಂದನೆ ಸಲ್ಲಿಸಬೇಕೆಂದರು. ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ಶುಭ ಹಾರೈಸಿದರು. ವೇದಿಕೆಯಲ್ಲಿ ಕೆನರಾ ಬ್ಯಾಂಕ್ ನಿವೃತ್ತ ಮೆನೇಜರ್ ಆಗಿರುವ ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಗೌರವಾದ್ಯಕ್ಷ ನಲ್ಕ ಗೋಪಾಲಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. ಚೆನ್ನಪ್ಪ ಗೌಡ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಸುಲೋಚನಾ, ಸುಮನ್ ಅತಿಥಿಗಳನ್ನು ಗೌರವಿಸಿದರು. ಚೈತ್ರ ಪ್ರಾರ್ಥಿಸಿದರು. ಕಂದಾಯ ನಿರೀಕ್ಷಕ ದಯಾನಂದ ಸ್ವಾಗತಿಸಿ ವಂದಿಸಿದರು. ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಸದಸ್ಯೆ ಇಂದಿರಾ ಪುರುಷೋತ್ತಮ ಆಚಾರ್ಯ, ವಿಶ್ವಬ್ರಾಹ್ಮಣ ಸೇವಾ ಸಂಘ ಮಾಜಿ ಅಧ್ಯಕ್ಷ ಎಸ್. ಎನ್. ಜಗದೀಶ ಆಚಾರ್ಯ, ವಿಶ್ವಕರ್ಮ ಸಮಾಜ ಸಭಾ ಬೀರಮಲೆ ಇದರ ಕೋಶಾಧಿಕಾರಿ ನಿರಂಜನ ಆಚಾರ್ಯ, ಮಾಜಿ ಅಧ್ಯಕ್ಷ ದೇವದಾಸ ಆಚಾರ್ಯ ಹಾರಾಡಿ, ವಿಶ್ವ ಬ್ರಾಹ್ಮಣ ಸಂಘ ಬೊಳುವಾರು ಇದರ ಅಧ್ಯಕ್ಷ ಶ್ರೀಧರ ಆಚಾರ್ಯ, ಗುರುಸೇವಾ ಪರಿಷತ್ ಪುತ್ತೂರು ವಿಧಾನ ಸಭಾ ಕ್ಷೇತ್ರ ವಲಯಾಧ್ಯಕ್ಷ ಪುರುಷೋತ್ತಮ ಆಚಾರ್ಯ, ಕಾರ್ಳೆ ಶ್ರೀ ಕಾಳಿಕಾಂಭ ದೇವಸ್ಥಾನ ಕುಂಬಳೆ, ಇದರ ಮಾಜಿ ಅಧ್ಯಕ್ಷ ಎಡನೀರು ಸುಧಾಕರ ಆಚಾರ್ಯ ಪುತ್ತೂರು, ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ವಸಂತ ಆಚಾರ್ಯ ಸಾಲ್ಮರ, ಬೀರಮಲೆ ವಿಶ್ವಕರ್ಮ ಸಮಾಜ ಸಭಾದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಆಚಾರ್ಯ, ಕಾರ್ಯದರ್ಶಿ ಕೆ ಲಕ್ಷ್ಮೀನಾರಾಯಣ ಆಚಾರ್ಯ, ಮುಕ್ರಂಪಾಡಿ ಸ.ಪ.ಪೂ ಕಾಲೇಜಿನ ಉಪನ್ಯಾಸಕ ಬೋಜರಾಜ ಆಚಾರ್ಯ, ಗಾಯತ್ರಿ ಮಹಿಳಾ ಮಂಡಲಿ ಬೀರಮಲೆ ಇದರ ಮಾಜಿ ಅಧ್ಯಕ್ಷೆ ಉಮಾವತಿ ಸುರೇಂದ್ರ ಆಚಾರ್ಯ, ಮಂಜುನಾಥ ಜ್ಯುವೆಲ್ಲರ್ಸ್ ಮಾಲಕ, ಪೂಕಟ್ಟೆ ಪಾಂಡುರಂಗ ಆಚಾರ್ಯ, ಸವಣೂರು ಜುವೆಲ್ಲರ್ಸ್ ನವೀನ್ ಕುಮಾರ್ ಆಚಾರ್ಯ, ಸರಕಾರಿ ಪ.ಪೂ ಕಾಲೇಜು ಕೊಂಬೆಟ್ಟು ಉಪನ್ಯಾಸಕ ಪೋಳ್ಯ ಎಂ ಮನಮೋಹನ್ ಆಚಾರ್ಯ ಪರ್ಪುಂಜ, ಹರ್ಷ ಬನ್ನೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.