ಪುತ್ತೂರು: ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹಾಗೂ ಪುತ್ತೂರಿನಲ್ಲಿ ಶಾಖೆಯನ್ನು ಹೊಂದಿರುವ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘವು 2022-23ನೇ ಸಾಲಿನಲ್ಲಿ ರೂ.8.90ಲಕ್ಷ ಲಾಭಗಳಿಸಿ, ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ದುಗ್ಗಪ್ಪ ನಾಯ್ಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.16ರಂದು ಮಂಗಳೂರು ಶ್ರೀ ಭಾರತಿ ಕಾಲೇಜಿನ ಶಂಕರಶ್ರೀ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಂಗಳೂರಿನಲ್ಲಿ ಕೇಂದ್ರ ಕಚೇರಿಯೊಂದಿಗೆ ಸಂಘವು ಪುತ್ತೂರಿನಲ್ಲಿ ಶಾಖೆಯನ್ನು ಹೊಂದಿದೆ. ವರದಿ ವರ್ಷದಲ್ಲಿ ಸಂಘವು ರೂ.6 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಶಿಕ್ಷಕ ಮತ್ತು ಶಿಕ್ಷಕೇತರ ವರ್ಗಕ್ಕೆ ರೂ.5.24 ಸಾಲ ನೀಡಲಾಗಿದೆ. ಪುತ್ತೂರು ಶಾಖೆಯಲ್ಲಿ 8 ಲಕ್ಷ ರೂಪಾಯಿಗಳ ಚಿನ್ನಾಭರಣ ಅಡಮಾನ ಸಾಲ ನೀಡಿದೆ. ಕಡಬ, ಉಳ್ಳಾಲ, ಸುಳ್ಯ, ಮೂಡಬಿದರೆ, ಬೆಳ್ತಂಗಡಿ ತಾಲೂಕುಗಳಲ್ಲೂ ಶಾಖೆಯನ್ನು ತೆರೆದು, ಎಲ್ಲ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ, ಪ್ರೌಢ, ಪಿಯುಸಿ ಹಾಗೂ ಪದವಿ ಕಾಲೇಜುಗಳ ಶಿಕ್ಷಕ ಶಿಕ್ಷಕೇತರ ವರ್ಗದವರಿಗೆ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಪಡೆಯಲು ಮತ್ತು ಗರಿಷ್ಠ ಬಡ್ಡಿ ದರದಲ್ಲಿ ಠೇವಣಿ ಹೂಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಅಭಿನಂದನೆ:
ಕಳೆದ ಐದು ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೆ.ಕೆ ಉಪಾಧ್ಯಾಯ ಮತ್ತು ವಿಠಲ ಎ.,2022-23ರಲ್ಲಿ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಭಾಜನರಾದ ಗಂಗಾಧರ ಆಳ್ವ ಕೆ.ಎನ್. ತುಂಬೆ, ಸುಕುಮಾರ ಬೆಳ್ತಂಗಡಿ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಕೃಷ್ಣ ಎಂ. ಮಂಗಳೂರು ಹಾಗೂ 2022ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯದುಪತಿ ಗೌಡ ಬೆಳ್ತಂಗಡಿ ಹಾಗೂ ಕಳೆದ ಸಾಲಿನ ನಿರ್ದೇಶಕರಾದ ವಿನ್ಸೆಂಟ್, ಸಚೇತ್ ಸುವರ್ಣರವರನ್ನು ಅಭಿನಂದಿಸಲಾಯಿತು.
ನಿರ್ದೇಶಕರಾದ ವಿಠಲ ಎ, ಯೂಸುಫ್ ವಿಟ್ಲ, ಸತೀಶ್ ಕೆ., ಶೇಖರ ರೈ, ಉಮೇಶ ಎಂ ಕರ್ಕೇರಾ, ಸುಕುಮಾರ, ಶ್ರೀಕೃಷ್ಣ ಎಂ, ಜಯಾನಂದ ಸುವರ್ಣ, ನವೀನ್ ಕುಮಾರ್, ಕಿಶೋರ್ ಕುಮಾರ್ ರೈ ಶೇಣಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಗಂಗಾಧರ ಆಳ್ವ ಕೆ.ಎನ್ ತುಂಬೆ ಸ್ವಾಗತಿಸಿದರು. ಯೂಸುಫ್ ವಿಟ್ಲ ಲೆಕ್ಕಪತ್ರವನ್ನು ಮಂಡಿಸಿದರು. ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಳ್ವ ಕೆ. ವರದಿ ಮಂಡಿಸಿದರು. ಡಾ. ನವೀನ್ ಶೆಟ್ಟಿ, ಶಕ್ತಿನಗರ ವಂದಿಸಿದರು. ಸಾನ್ವಿ ಮತ್ತು ಜಾಹ್ನವಿ ಪ್ರಾರ್ಥಿಸಿದರು. ನಿರ್ದೇಶಕರಾದ ಸಂಧ್ಯಾ ಪಿ ಕುಂಬ ಮತ್ತು ಸುರೇಖಾ ಶಕ್ತಿನಗರ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಕೆಯ್ಯೂರು ಮತ್ತು ಭವ್ಯ ಕುಪ್ಪೆಟ್ಟಿ ಸಹಕರಿಸಿದರು.